Breaking News
ಬಿಎಂಟಿಸಿ ಬಸ್ ಹರಿದು ಯುವ ಪೇದೆ ಸಾವು

ಬಿಎಂಟಿಸಿ ಬಸ್ ಹರಿದು ಯುವ ಪೇದೆ ಸಾವು

ಬೆಂಗಳೂರು: ಬಿಎಂಟಿಸಿ ಬಸ್ ಹರಿದು ಯುವ ಪೇದೆಯೊಬ್ಬರು ಮೃತಪಟ್ಟಿರುವ ಘಟನೆ ಬನಶಂಕರಿ ಬಸ್ ನಿಲ್ದಾಣದ ಸಮೀಪ ಗುರುವಾರ ರಾತ್ರಿ ನಡೆದಿದೆ.

ಮೂಲತಃ ವಿಜಯಪುರ ಜಿಲ್ಲೆಯ ಸಿದ್ದಪ್ಪ ಭೈರವಾಡಿ (23) ಮೃತ ಪೇದೆಯಾಗಿದ್ದಾರೆ. ಸಿದ್ದಪ್ಪ ಅವರು 2016ರಲ್ಲಿ ಸೇವೆಗೆ ಸೇರಿದ್ದು, ಜಯನಗರ ಕಾನೂನು ಸುವ್ಯವಸ್ಥೆ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಅವಿವಾಹಿತರಾಗಿದ್ದ ಸಿದ್ದಪ್ಪ ಸಾರಕ್ಕಿ ಬಳಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಗುರುವಾರ ರಾತ್ರಿ 11.45ರ ಸುಮಾರಿಗೆ ಕೆಲಸ ಮುಗಿಸಿಕೊಂಡು ಜಯನಗರ ಠಾಣೆಯಿಂದ ಸಾರಕ್ಕಿಯಲ್ಲಿರುವ ತಮ್ಮ ಮನೆಗೆ ಬೈಕ್ ನಲ್ಲಿ ತೆರಳುತ್ತಿದ್ದರು. ಜಯನಗರ 7ನೇ ಬ್ಲಾಕ್ ಕಡೆಯಿಂದ ಬನಶಂಕರಿ ಕಡೆಗೆ ವೇಗವಾಗಿ ಹೋಗುತ್ತಿದ್ದ ಬಸ್ ಬೈಕ್’ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕೆಳಗೆ ಬಿದ್ದ ಪೇದೆ ಮೇಲೆ ಬಸ್ ಹರಿದಿದೆ. ಈ ವೇಳೆ ಪೇದೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆಂದು ಪೊಲೀಸರು ಹೇಳಿದ್ದಾರೆ.

Leave a Reply

Your email address will not be published.