Breaking News
ಮೈಸೂರು ಮೃಗಾಲಯ ಯಾವಾಗ ಸ್ಥಾಪನೆ ಅಯ್ತು ಗೊತ್ತಾ?

ಮೈಸೂರು ಮೃಗಾಲಯ ಯಾವಾಗ ಸ್ಥಾಪನೆ ಅಯ್ತು ಗೊತ್ತಾ?

ಮೂರನೇ ಮುಮ್ಮಡಿ ಕೃಷ್ಣರಾಜ ಒಡೆಯರ್

ಮೂರನೇ ಮುಮ್ಮಡಿ ಕೃಷ್ಣರಾಜ ಒಡೆಯರ್ 1799ರಿಂದ 1863ರವರೆಗೆ ಆಡಳಿತ ನಡೆಸಿದರು. ಇವರ ಹುಟ್ಟು ಹೆಸರು ನಂಜರಾಜ ಒಡೆಯರ್. ನಂಜುಂಡೇಶ್ವರ ಅನುಗ್ರಹದಿಂದ ಜನಿಸಿದ್ದರಿಂದ ಆ ಹೆಸರು ಇಡಲಾಯಿತು ಎನ್ನಲಾಗಿದೆ. ಪಟ್ಟಾಭಿಷೇಕದ ಸಮಯದಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್ ಎಂದು ಕರೆಯಲಾಯಿತು.
ಟಿಪ್ಪು ಸುಲ್ತಾನನು ನಾಶ ಮಾಡಿದ ದೇವಸ್ಥಾನಗಳು, ಅರಮನೆಗಳು ಇವುಗಳನ್ನು ಇವರು ಮತ್ತೆ ಕಟ್ಟಿಸಿದರು. ಚಾಮುಂಡಿಬೆಟ್ಟಕ್ಕೆ ಹೋಗುವ ದಾರಿಯನ್ನು ಸುಲಭಗೊಳಿಸಿದರು. ಇವರು ಅಗ್ರಹಾರಗಳು, ಧರ್ಮಸತ್ರಗಳು, ಸಾಲುಮರಗಳು, ಕೆರೆಕಟ್ಟೆಗಳು ಮೈಸೂರು ರಾಜ್ಯದಲ್ಲೆಲ್ಲ ಕಟ್ಟಿಸಿದರು. ಏಷ್ಯಾದಲ್ಲೆ ಮೊದಲಬಾರಿಗೆ ಮೈಸೂರಿನಲ್ಲಿ ಮೃಗಾಲಯ, ಪಶುವೈದ್ಯಶಾಲೆಗಳ ಸ್ಥಾಪನೆಯಾಯಿತು. ಪ್ರಸಿದ್ದವಾದ ಜಗನ್ಮೋಹನ ಅರಮನೆ ಮತ್ತು ಲೋಕರಂಜನ್ ಮಹಲ್ ಕಟ್ಟಡಗಳು ಇವರು ಕಟ್ಟಿಸಿದ ಸುಂದರ ಕಟ್ಟಡಗಳು. ತಾವೇ ಬರಹಗಾರರಾಗಿದ್ದು, ಇವರ ಆಸ್ಥಾನದಲ್ಲಿ ಕೆಂಪುನಾರಾಯಣ, ಅಳಿಯ ಲಿಂಗರಾಜ, ಅಭಿನವ ಕಾಳಿದಾಸನೆಂದು ಕರೆಸಿಕೊಂಡ ಬಸವಪ್ಪದಶಾಸ್ತ್ರೀ, ದೇವಚಂದ್ರ ಮುಂತಾದ ವಿಸ್ವಾಂಸದಿದ್ದರು.
ವೀಣೆ ವೆಂಕಟಸುಬ್ಬಯ್ಯ, ಚಿಕ್ಕರಾಮಪ್ಪ, ಸಾಂಬಯ್ಯ ಹಾಗೂ ಮೈಸೂರು ಸದಾಶಿವರಾಯರು ಮುಂತಾದ ಸಂಗೀತ ವಿದ್ವಾಂಸರೂ ಇದ್ದರು. ವಿಶಿಷ್ಠ ಶೈಲಿಯ ಮೈಸೂರು ಚಿತ್ರಕಲೆಯು ಇವರ ಕಾಲದಲ್ಲಿ ಉನ್ನತಿಯನ್ನು ಕಂಡಿತು. ಕರ್ನಾಟಕ ಭೋಜನೆಂದೇ ಪ್ರಸಿದ್ದರಾದ ಇವರು ಒಂಭತ್ತು ನಿಧಿಗಳುಳ್ಳ, ಶ್ರೀತತ್ವ್ತ ನಿಧಿಯೆಂಬ ಸಚಿತ್ರ ವಿಶ್ವಕೋಶವನ್ನು ಬರೆಸಿದರು. ಬೀದಿ ದೀಪದ ಸೌಕರ್ಯ ಇವರ ಕಾಲದಲ್ಲಿ ಬಂದಿತು.

Leave a Reply

Your email address will not be published.