Breaking News
ನವಾಜುದ್ದೀನ್ ಗೆ ಹೀರೋಯಿನ್ ಆಗೋ ಅವಕಾಶ ಪಡೆದ ಕನ್ನಡದ ನಟಿ?

ನವಾಜುದ್ದೀನ್ ಗೆ ಹೀರೋಯಿನ್ ಆಗೋ ಅವಕಾಶ ಪಡೆದ ಕನ್ನಡದ ನಟಿ?

ಕನ್ನಡದ ಯುವ ನಟಿಯರು ಈಗ ತಮ್ಮ ಪ್ರತಿಭೆಯ ಮೂಲಕ ಇತರ ಚಿತ್ರರಂಗದಲ್ಲಿಯೂ ಹೆಸರು ಮಾಡುತ್ತಿದ್ದಾರೆ. ಆ ಪೈಕಿ ನಟಿ ಶ್ರದ್ಧಾ ಶ್ರೀನಾಥ್ ಕೂಡ ಒಬ್ಬರು. ಈಗಾಗಲೇ ಬೇರೆ ಬೇರೆ ಇಂಡಸ್ಟಿಯಲ್ಲಿ ಸಿನಿಮಾ ಮಾಡಿ ಬಂದಿರುವ ಶ್ರದ್ಧಾ ಈಗ ತಮ್ಮ ಎರಡನೇ ಬಾಲಿವುಡ್ ಸಿನಿಮಾ ಮಾಡುತ್ತಿದ್ದಾರೆ. ಲಾಯರ್ ಶ್ರದ್ಧಾ ಆಗಿದ್ದ ‘ಯೂ ಟರ್ನ್’ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ನೋಡ ನೋಡುತ್ತಲೇ ಒಂದರ ನಂತರ ಒಂದು ಒಳ್ಳೆ ಒಳ್ಳೆಯ ಸಿನಿಮಾ ಮಾಡಿದರು. ಒಂದು ಹೆಜ್ಜೆ ಮುಂದೆ ಹೋಗಿ ಬಾಲಿವುಡ್ ನಲ್ಲಿ ಕೂಡ ‘ಮಿಲನ್ ಟಾಕೀಸ್’ ಚಿತ್ರ ಮಾಡುತ್ತಿದ್ದರು. ಆದರೆ ಈಗ ಹಿಂದಿಯಲ್ಲಿ ಶ್ರದ್ಧಾ ಎರಡನೇ ಸಿನಿಮಾ ಶುರು ಆಗಲಿದ್ದು, ನಟ ನವಾಜುದ್ದೀನ್ ಸಿದ್ದಿಖಿ ಜೊತೆಗೆ ಅವರು ತೆರೆ ಹಂಚಿಕೊಳ್ಳಲಿದ್ದಾರಂತೆ.
ನವಾಜುದ್ದೀನ್ ಸಿದ್ದಿಖಿ ಮತ್ತು ಶ್ರದ್ಧಾ ಶ್ರೀನಾಥ್ ಕಾಂಬಿನೇಶನ್ ನಲ್ಲಿ ಬರುವ ಈ ಸಿನಿಮಾವನ್ನು ಡಿ ಆರ್ ಶ್ರೀನಿವಾಸ್ ಎಂಬುವವರು ಈ ನಿರ್ದೇಶನ ಮಾಡುತ್ತಿದ್ದಾರೆ. ವಿಶೇಷ ಅಂದರೆ ಈ ಸಿನಿಮಾ ಹಿಂದಿಯ ಜೊತೆಗೆ ಕನ್ನಡದಲ್ಲಿ ಕೂಡ ತೆರೆಗೆ ಬರಲಿದೆಯಂತೆ.

Leave a Reply

Your email address will not be published.