Breaking News
ಹಾವಿನ ಕಡಿತದಿಂದ ನಟಿ ದುರ್ಮರಣ

ಹಾವಿನ ಕಡಿತದಿಂದ ನಟಿ ದುರ್ಮರಣ

ನಟಿಯೋರ್ವಳು ಜೀವಂತ ಹಾವನ್ನು ಇಟ್ಟುಕೊಂಡು ಕಾರ್ಯಕ್ರಮ ನೀಡುತ್ತಿದ್ದ ವೇಳೆ ಹಾವಿನ ಕಡಿತಕ್ಕೆ ಒಳಗಾಗಿ ಮೃತಪಟ್ಟಿರುವ ಘಟನೆ ಕೋಲ್ಕತಾದಲ್ಲಿ ನಡೆದಿದೆ. ಜಾತ್ರಾ ಕಾರ್ಯಕ್ರಮವೊಂದರಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಕೂಡ ಹಾವನ್ನು ಇಟ್ಟು ಕೊಂಡು 63 ವರ್ಷದ ನಟಿ ಕಾರ್ಯಕ್ರಮ ನಿಡುತ್ತಿದ್ದರು. ಅವರು ವಿಷಪೂರಿತವಾದ ಹಾವನ್ನು ಇರಿಸಿಕೊಂಡು ಕಾರ್ಯ ಕ್ರಮ ನಡೆಸಿಕೊಡುತ್ತಿದ್ದರು. ಈ ವೇಳೆ ನಟಿಗೆ ಹಾವು ಕಡಿದಿದೆ.

ಕಾಲಿದಾಸಿ ಮೊಂಡಲ್ ಎಂಬ ಈ ನಟಿಯನ್ನು ಹಾವು ಕಡಿತಕ್ಕೆ ಒಳಗಾಗುತ್ತಿದ್ದಂತೆ ಮಂತ್ರ ಹಾಕುವವರ ಬಳಿ ಕರೆದುಕೊಂಡು ಹೋಗಲಾಗಿದೆ. ಹಾವು ಕಡಿತಕ್ಕೆ ಒಳಗಾದವರಿಗೆ ಚಿಕಿತ್ಸೆ ನೀಡಲು ಅತ್ಯಗತ್ಯವಾಗಿರುವ ಸಮಯದಲ್ಲಿ ಆಕೆಯನ್ನು ಮಂತ್ರವಾದಿಗಳ ಬಳಿ ಇರಿಸಿಕೊಳ್ಳಲಾಗಿತ್ತು. ಆದರೆ ಅದರಿಂದ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಮತ್ತೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಅಷ್ಟರಲ್ಲೇ ಸಮಯ ಮೀರಿ ಹೋಗಿದ್ದು, ಆಕೆ ಮೃತಪಟ್ಟಿದ್ದಾಗಿ ವೈದ್ಯರು ಘೋಷಿಸಿದರು.

ಪ್ರತೀ ವರ್ಷವೂ ಕೂಡ ಈ ನಟಿ ಜಾತ್ರೆಯಲ್ಲಿ ಕಾರ್ಯಕ್ರಮ ನೀಡಲು ಪ್ಲಾಸ್ಟಿಕ್ ಹಾವನ್ನು ಬಳಕೆ ಮಾಡಿಕೊಳ್ಳುತ್ತಿದ್ದಳು. ಆದರೆ ಈ ವರ್ಷ 2 ನಿಜವಾದ ಹಾವುಗಳನ್ನು ಇರಿಸಿಕೊಂಡು ಕಾರ್ಯಕ್ರಮ ನೀಡುತ್ತಿದ್ದಳು. ಈ ವೇಳೆ ಹಾವಿನ ಕಡಿತಕ್ಕೆ ಒಳಗಾಗಿ ನಟಿ ಮೃತಪಟ್ಟಿದ್ದಾಗಿ ಪೊಲೀಸರು ಹೇಳಿದ್ದಾರೆ.

Leave a Reply

Your email address will not be published.