Breaking News
ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ನಟಿ ಭಾವನ

ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ನಟಿ ಭಾವನ

ನಟಿ ಭಾವನಾ ಚಿತ್ರದುರ್ಗ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಆಗಿದ್ದ ನಟಿ ಭಾವನಾ ಇಂದು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಬಿಜೆಪಿ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ನಟಿ ಭಾವನ ಅವರನ್ನು ಮುರುಳೀಧರ್ ಪಕ್ಕಕ್ಕೆ ಬರಮಾಡಿಕೊಂಡರು. ಇಂದು ಈ ಹಿಂದೆ ತಾವು ಬಿಜೆಪಿಗೆ ಸೇರುವ ಬಗ್ಗೆ ಯಡಿಯೂರಪ್ಪ, ಮುರುಳೀಧರ್ ರಾವ್ ಜೊತೆ ಮಾತುಕತೆ ನಡೆಸಿದ್ದರು. ಆಗ ಅವರಿಗೆ ಬಿಜೆಪಿಗೆ ಸೇರುವ ಬಗ್ಗೆ ಗ್ರೀನ್ ಸಿಗ್ನಲ್ ಸಿಕ್ಕ ಹಿನ್ನಲೆಯಲ್ಲಿ ಇಂದು ಮುರುಳೀಧರ್ ರಾವ್ ಸಮ್ಮುಖದಲ್ಲಿ ಬಿಜೆಪಿಗೆ ಭಾವನ ಅಧಿಕೃತವಾಗಿ ಸೇರಿಕೊಂಡಿದ್ದಾರೆ.

ಇದೇ ವೇಳೆ ಸರಳ ಸಮಾರಂಭದಲ್ಲಿ ಪಿ.ಸಿ. ಮೋಹನ್, ಮಾಜಿ ಸಂಸದೆ ತೇಜಸ್ವಿನಿ ರಮೇಶ್, ಅನ್ವರ್ ಮಾಣಿಪ್ಪಾಡಿ ಉಪಸ್ಥಿತಿ ಇದ್ದರು.

Leave a Reply

Your email address will not be published.