Breaking News
ಯಾವ ನಟ-ನಟಿಯರು ಎಲ್ಲೆಲ್ಲಿ ಮತದಾನ ಮಾಡಲಿದ್ದಾರೆ ?

ಯಾವ ನಟ-ನಟಿಯರು ಎಲ್ಲೆಲ್ಲಿ ಮತದಾನ ಮಾಡಲಿದ್ದಾರೆ ?

ಮತದಾನ ಮಾಡಿ ಅಂತ ಇಷ್ಟು ದಿನಗಳ ಕಾಲ ಜಾಗೃತಿ ಮೂಡಿಸಿದ ಸ್ಯಾಂಡಲ್ ವುಡ್ ನ ಸ್ಟಾರ್ ಗಳು ಎಲ್ಲೆಲ್ಲಿ ವೋಟು ಮಾಡುತ್ತಾರೆ ಎನ್ನುವ ಕುತೂಹಲ ಎಲ್ಲರಿಗೂ ಇರಲಿದೆ. ಹಾಗಾದ್ರೆ ಯಾವ ಕಲಾವಿದರು ಯಾವ ಏರಿಯಾದಲ್ಲಿ ಮತದಾನ ಮಾಡುತ್ತಾರೆ ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಹಾಗೂ ರಾಘವೇಂದ್ರ ರಾಜ್ ಕುಮಾರ್ , ವಿನಯ್ ರಾಜ್ ಕುಮಾರ್ ಸೇರಿದಂತೆ ಡಾ ರಾಜ್ ಕುಮಾರ್ ಕುಟುಂಬದವರು ಸದಾಶಿವ ನಗರದ ಪೂರ್ಣಪ್ರಜ್ಞ ಶಾಲೆಯಲ್ಲಿ ಮತದಾನ ಮಾಡುತ್ತಿದ್ದಾರೆ.

ನಟ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಪ್ರಿಯಾಂಕ ಉಪೇಂದ್ರ ಕತ್ರಿಗುಪ್ಪೆ ಬಳಿ ಇರುವ ಸರ್ಕಾರಿ ಶಾಲೆಯಲ್ಲಿ ಮತದಾನ ಮಾಡಲಿದ್ದಾರೆ. ಇನ್ನು ರಾಕಿಂಗ್ ಸ್ಟಾರ್ ಯಶ್ ಕೂಡ ಕತ್ರಿಗುಪ್ಪೆ ಯಲ್ಲೇ ವೋಟ್ ಮಾಡುತ್ತಾರೆ. ಆದರೆ ರಾಧಿಕಾ ಪಂಡಿತ್ ಮಾತ್ರ ಮಲ್ಲೇಶ್ವರಂ ನಲ್ಲಿ ಮತದಾನ ಮಾಡುತ್ತಾರೆ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಪುಟ್ಟೇನಹಳ್ಳಿಯಲ್ಲಿ ತಮ್ಮ ಕುಟುಂಬದ ಜೊತೆಯಲ್ಲಿ ಮತದಾನ ಮಾಡಿ ಅಭಿಮಾನಿಗಳಲ್ಲಿ ಜಾಗೃತಿ ಮೂಡಿಸಲಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ದಿನಕರ್ ತೂಗುದೀಪ ರಾಜರಾಜೇಶ್ವರಿ ನಗರದಲ್ಲಿ ಮತದಾನ ಮಾಡಲಿದ್ದಾರೆ. ಇನ್ನು ದರ್ಶನ್ ಅವರ ತಾಯಿ ಮೀನಾ ತೂಗುದೀಪ ಮೈಸೂರಿನಲ್ಲಿ ತಮ್ಮ ಮತ ಚಲಾಯಿಸಲಿದ್ದಾರೆ.

ಇತ್ತೀಚಿಗಷ್ಟೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಮೇಘನಾ ರಾಜ್ ಹಾಗೂ ನಟಿ ತಾರಾ ಅನುರಾಧ ಮತ್ತು ಕುಟುಂಬಸ್ಥರು ಎಲ್ಲರೂ ಜೆಪಿ ನಗರದಲ್ಲಿ ಮತದಾನ ಮಾಡಲಿದ್ದಾರೆ.

ಜಾಗ್ವಾರ್ ಹೀರೋ ನಟ ನಿಖಿಲ್ ಕುಮಾರ್ ಪದ್ಮನಾಬ ನಗರದಲ್ಲಿ ವೋಟ್ ಮಾಡುತ್ತಾರೆ ಎನ್ನುವುದು ಹಲವರ ಊಹೆ ಆಗಿರುತ್ತದೆ. ಆದರೆ ನಿಖಿಲ್ ಮಾಗಡಿ ಕ್ಷೇತ್ರಕ್ಕೆ ಸೇರುವ ಕೇತಕನಹಳ್ಳಿಯಲ್ಲಿ ಮತದಾನ ಮಾಡಲಿದ್ದಾರೆ.

ಸ್ಪೆಷಲ್ ಸ್ಟಾರ್ ಧನಂಜಯ ತಮ್ಮ ಹುಟ್ಟುರಿನಲ್ಲಿ ಮತದಾನ ಮಾಡಲಿದ್ದಾರೆ. ವೋಟ್ ಮಾಡುವುದಕ್ಕಾಗಿಯೇ ಬಿಡುವು ಮಾಡಿಕೊಂಡು ನಾಳೆ ಊರಿಗೆ ಪ್ರಯಾಣ ಬೆಳೆಸಿ ಅರಸಿಕೆರೆಯ ಕಾಳೇನಹಳ್ಳಿಯಲ್ಲಿ ಮತದಾನ ಮಾಡುತ್ತಾರೆ

ಶಿವರಾಜ್ ಕುಮಾರ್ ಗೀತಾ ಶಿವರಾಜ್ ಕುಮಾರ್ ಹಾಗೂ ಪುತ್ರಿಯರು ನಾಗಾವಾರದಲ್ಲಿ ಮತದಾನ ಮಾಡಲಿದ್ದಾರೆ. ಶಿವರಾಜ್ ಕುಮಾರ್ ಪ್ರತಿ ವರ್ಷ ತಪ್ಪದೆ ಮತದಾನ ಮಾಡುತ್ತಾ ಬಂದಿದ್ದಾರೆ

Leave a Reply

Your email address will not be published.