Breaking News
ಹಳೆ ಗಾಯದ ನೋವಿನಲ್ಲಿ ದರ್ಶನ್ : ಯಜಮಾನ’ ಚಿತ್ರೀಕರಣಕ್ಕೆ ಬ್ರೇಕ್

ಹಳೆ ಗಾಯದ ನೋವಿನಲ್ಲಿ ದರ್ಶನ್ : ಯಜಮಾನ’ ಚಿತ್ರೀಕರಣಕ್ಕೆ ಬ್ರೇಕ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ ಯಜಮಾನ ಸಿನಿಮಾದ ಚಿತ್ರೀಕರಣದಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ಶೂಟಿಂಗ್ ನಿಂದ ಬಿಡುವು ಮಾಡಿಕೊಂಡು ದರ್ಶನ್ ಮನೆಯಲ್ಲಿ ರೆಸ್ಟ್ ಮಾಡುತ್ತಿದ್ದಾರಂತೆ. ವಿಶ್ರಾಂತಿ ಪಡೆಯುವಂತದ್ದು ಏನಾಯ್ತು ಅಂತೀರಾ ? ಯಜಮಾನ ಸಿನಿಮಾ ಚಿತ್ರೀಕರಣ ಇತ್ತೀಚಿಗಷ್ಟೇ ಚಿಕ್ಕಮಂಗಳೂರಿನಲ್ಲಿ ನಡೆಯುವ ಸಂದರ್ಭದಲ್ಲಿ ದರ್ಶನ್ ಅವರಿಗೆ ಕೈ ನೋವು ಕಾಣಿಸಿಕೊಂಡಿದೆ. ಹಾಗಂತ ದರ್ಶನ್ ಯಜಮಾನ ಚಿತ್ರದ ಶೂಟಿಂಗ್ ನಲ್ಲಿ ಕೈ ಗಾಯ ಮಾಡಿಕೊಂಡಿಲ್ಲ. ಈ ಹಿಂದೆ ಚಿತ್ರೀಕರಣದ ಸಮಯದಲ್ಲಿ ದರ್ಶನ್ ಅವರ ಕೈಗೆ ಗಾಯವಾಗಿತ್ತಂತೆ ಅದರ ನೋವು ಈಗ ಕಾಣಿಸಿಕೊಂಡಿದೆ.
ಅದಷ್ಟೇ ಅಷ್ಟೇ ಅಲ್ಲದೆ ಚಿಕ್ಕಮಂಗಳೂರಿನಲ್ಲಿ ಸಾಹಸ ದೃಶ್ಯಗಳನ್ನ ಚಿತ್ರೀಕರಿಸಲಾಗಿದ ಆ ವೇಳೆಯಲ್ಲಿ ಹಳೆ ಗಾಯದ ನೋವು ಕಾಣಿಸಿಕೊಂಡಿದೆ ಅದರ ಜೊತೆಯಲ್ಲಿ ಕಾಲು ಟ್ವಿಸ್ಟ್ ಆಗಿದೆ. ಆದ್ದರಿಂದ ಸಿನಿಮಾತಂಡ ಮೇ 2 ರಿಂದ ಬ್ರೇಕ್ ತೆಗೆದುಕೊಂಡಿದೆ.

Leave a Reply

Your email address will not be published.