Breaking News
ಮೇ 15ಕ್ಕೆ ಬೆಂಗಳೂರಿನ ಯಾಯ್ಯಾವ ಪ್ರದೇಶಕ್ಕೆ ಕಾವೇರಿ ನೀರಿಲ್ಲ!

ಮೇ 15ಕ್ಕೆ ಬೆಂಗಳೂರಿನ ಯಾಯ್ಯಾವ ಪ್ರದೇಶಕ್ಕೆ ಕಾವೇರಿ ನೀರಿಲ್ಲ!

ಕಾವೇರಿ ನೀರು ಪೂರೈಸುವ ಯಂತ್ರಾಗಾರವನ್ನು ಉನ್ನತೀಕರಿಸಲಾಗುತ್ತಿದೆ. ಹಾಗಾಗಿ ಮೇ 15ರಂದು ನಗರ ವಿವಿಧ ಪ್ರದೇಶಗಳಿಗೆ ಕುಡಿಯುವ ನೀಡು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಹಾರೋಹಳ್ಳಿ, ತೊರೆಕಾಡನಹಳ್ಳಿ ಹಾಗೂ ತಾತಗುಣಿಯಲ್ಲಿ ಕಾವೇರಿ ನೀರು ಪೂರೈಕೆ ಕೇಂದ್ರಗಳಿದ್ದು, ಅಲ್ಲಿನ ಯಂತ್ರಗಳನ್ನು ಉನ್ನತೀಕರಣಗೊಳಿಸುತ್ತರುವ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ 8ರಿಂದ ಸಂಜೆ 4 ಗಂಟೆಯವರೆಗೆ ನೀರು ಪೂರೈಕೆ ಇರುವುದಿಲ್ಲ.

ಬಸವನಗುಡಿ, ಜಯನಗರ, ಜೆಪಿನಗರ, ಬನಶಂಕರಿ 2 ಮತ್ತು 3 ನೇ ಹಂತ, ಚಾಮರಾಜಪೇಟೆ, ವಿವಿಪುರ, ಕುಮಾರಸ್ವಾಮಿ ಲೇಔಟ್‌, ಭೈರಸಂದ್ರ, ಪದ್ಮನಾಭನಗರ, ಬಿಟಿಎಂ ಲೇಔಟ್, ಇಂದಿರಾನಗರ, ಮೈಸೂರು ರಸ್ತೆ, ಬಾಪೂಜಿನಗರ, ಸಿಎಲ್‌ಆರ್‌, ಓಕಳಿಪುರ, ಹಲಸೂರು, ಶಾಂತಿ ನಗರ, ಕೋರಮಂಗಲದಲ್ಲಿ ಕಾವೇರಿ ನೀರು ಪೂರೈಕೆ ಇರುವುದಿಲ್ಲ.

ಇನ್ನು ವಿಜಯನಗರ, ಜೀವನ್‌ಭೀಮಾನಗರ, ಹೊಂಬೇಗೌಡನಗರ, ಕೆಆರ್‌ ಮಾರುಕಟ್ಟೆ, ನೀಲಸಂದ್ರ, ಮಲ್ಲೇಶ್ವರ, ಮತ್ತಿಕೆರೆ, ಜಯಮಹಲ್, ವಸಂತನಗರ, ಜಾನಕಿರಾಮ ಲೇಔಟ್‌, ಲಿಂಗರಾಜಪುರ, ಮುತ್ಯಾಲನಗರ, ಆರ್‌ಟಿನಗರ, ಗುಟ್ಟಳ್ಳಿ, ಸುಧಾಮನಗರ, ಭಾರತೀನಗರ, ಸದಾಶಿವನಗರ, ಹೆಬ್ಬಾಳ, ಬನ್ನಪ್ಪ ಪಾರ್ಕ್, ಕಸ್ತೂರ ಬಾ ರಸ್ತೆ, ಇಸ್ರೋ ಲೇಔಟ್‌, ಪೂರ್ಣಪ್ರಜ್ಞಾ ಲೇಔಟ್‌, ಸಂಪಂಗಿ ರಾಮನಗರ, ಚಿಕ್ಕಲಾಲ್‌ಬಾಗ್‌, ಶಿವಾಜಿನಗರ, ಫ್ರೇಜರ್‌ ಟೌನ್‌ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ಪೂರೈಕೆ ಸ್ಥಗಿತಗೊಳ್ಳಲಿದೆ.

ನಿತ್ಯ 1,450 ದಶಲಕ್ಷ ನೀರು ಪೂರೈಕೆ: ಕಾವೇರಿಯ ವಿವಿಧ ಜಲಾಶಯಗಳಿಂದ ನಗರಕ್ಕೆ ಪ್ರತಿ ವರ್ಷ 19 ಟಿಎಂಸಿ ಅಡಿ ನೀಡು ಪೂರೈಸಲಾಗುತ್ತದೆ. ನಗರಕ್ಕೆ ಪ್ರತಿ ತಿಂಗಳು ಒಂದೂವರೆ ಟಿಎಂಸಿ ನೀರು ಅಗತ್ಯವಿದ್ದು, ಪ್ರತಿ ದಿನ 1,450 ದಶಲಕ್ಷ ಲೀಟರ್ ನೀರು ಪೂರೈಕೆ ಮಾಡಲಾಗುತ್ತದೆ. ನಗರದ ಹೃದಯಭಾಗದ ಪ್ರದೇಶಗಳು ಸಂಪೂರ್ಣ ಕಾವೇರಿ ನೀರನ್ನು ಅವಲಂಭಿಸಿವೆ.

Leave a Reply

Your email address will not be published.