Breaking News
ನಿಫಾ ವೈರಸ್ ಹಿನ್ನೆಲೆ -ಜಿಲ್ಲೆಯಲ್ಲಿಯೂ ಕಟ್ಟೆಚ್ಚರ

ನಿಫಾ ವೈರಸ್ ಹಿನ್ನೆಲೆ -ಜಿಲ್ಲೆಯಲ್ಲಿಯೂ ಕಟ್ಟೆಚ್ಚರ

ಕೇರಳದಲ್ಲಿ 10ಮಂದಿ ಸಾವಿಗೆ ಕಾರಣವಾಗಿದ್ದ ನಿಫಾ ವೈರಸ್ ರಾಜ್ಯಕ್ಕೂ ಹರಡುವ ಸಾಧ್ಯತೆಗಳಿದ್ದು, ಇದರ ವಿರುದ್ಧ ಸಮರ ಸಾರಲು ಜಿಲ್ಲಾಡಳಿತ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಈ ಕುರಿತು  ನಿನ್ನೆ ಸುದ್ದಿಗೋಷ್ಠಿ ನಡೆಸಿದ  ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಕೇರಳದಲ್ಲಿ ನಿಫಾ ವೈರಸ್ ಗೆ 10ಮಂದಿ ಬಲಿಯಾಗಿದ್ದಾರೆ. ಕೇರಳದ ಗಡಿಭಾಗಗಳಾದ ಚಾಮರಾಜನಗರ,ಮೈಸೂರು,ಉಡುಪಿ, ಕೊಡಗು ಮತ್ತಿತರ ಜಿಲ್ಲೆಗಳಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ

Leave a Reply

Your email address will not be published.