Breaking News
ಪ್ರೀತಿಸಿದ ಹುಡುಗನ ಆವಾಜ್ ಗೆ ಬೇಸತ್ತ ಯುವತಿ ನೇಣಿಗೆ ಶರಣು

ಪ್ರೀತಿಸಿದ ಹುಡುಗನ ಆವಾಜ್ ಗೆ ಬೇಸತ್ತ ಯುವತಿ ನೇಣಿಗೆ ಶರಣು

ಮೈಸೂರು: ಪ್ರೀತಿಸುತ್ತಿದ್ದ ಹುಡುಗ ನಿಂದಿಸಿದ್ದಕ್ಕೆ ಮನನೊಂದ ಯುವತಿ ಸಾವಿಗೆ ಶರಣಾಗಿರುವ ಘಟನೆ ವಿಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬೆಳವಾಡಿಯ ನಿವಾಸಿ ಧನ್ಯ(19) ಆತ್ಮಹತ್ಯೆ ಮಾಡಿಕೊಂಡ ಯುವತಿ. ಧನ್ಯ ಮೇಟಗಳ್ಳಿ ನಿವಾಸಿ ದೀನ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಈ ಹಿನ್ನೆಲೆಯಲ್ಲಿ ಧನ್ಯಾಳ ಪೋಷಕರು ದೀನ್‍ನನ್ನು ಮನೆಗೆ ಕರೆದುಕೊಂಡು ಬರುವಂತೆ ಹೇಳಿದ್ದಾರೆ. ಈ ವಿಷಯವನ್ನು ಧನ್ಯ ಪ್ರಿಯಕರ ದೀನ್‍ಗೆ ತಿಳಿಸಿದ್ದಾಳೆ. ಈ ನಡುವೆ ಇಬ್ಬರ ನಡುವೆ ಜಗಳ ನಡೆದಿದ್ದು, ಧನ್ಯಾಳ ತಂದೆ ನಡೆಸುತ್ತಿದ್ದ ಅಂಗಡಿ ಮುಂದೆ ದೀನ್ ಆಕೆಯನ್ನು ನಿಂದಿಸಿದ್ದಾನೆ. ಇದರಿಂದ ಮನನೊಂದು ಧನ್ಯ ಮನೆಗೆ ಬಂದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.  ಈ ಬಗ್ಗೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Leave a Reply

Your email address will not be published.