Breaking News

2009ರ ಏ.1ರಿಂದ 2017ರ ಡಿ.31ವರೆಗಿನ ರೈತರ ಸಂಪೂರ್ಣ ಸಾಲ ಮನ್ನಾ ?

2009ರ ಏ.1ರಿಂದ 2017ರ ಡಿ.31ವರೆಗಿನ ರೈತರ ಸಂಪೂರ್ಣ ಸಾಲ ಮನ್ನಾ ?

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಉಪ ಮುಖ್ಯಮಂತ್ರಿ ಪರಮೇಶ್ವರ್ ಅವರು ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕೃಷಿ ಸಾಲ ಮನ್ನಾ ಸಂಬಂಧಪಟ್ಟಂತೆ ರೈತ ಮುಖಂಡರ, ಸಂಘಟನೆಗಳ ಸಭೆ ನಡೆಸಿದರು. ಸಭೆಯಲ್ಲಿ ಮುಕ್ತವಾದ ಚರ್ಚೆ ನಡೆಯಿತು.

ಕೊನೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, 2009ರ ಏಪ್ರಿಲ್ 1ರಿಂದ 2017ರ ಡಿಸೆಂಬರ್ 31ರವರೆಗೆ ಸಣ್ಣ ಮತ್ತು ಅತಿ ಸಣ್ಣ ರೈತರು ಮಾಡಿರುವ ಬೆಳೆ ಸಾಲವನ್ನು ಸಂಪೂರ್ಣ ಮನ್ನಾ ಮಾಡಲಾಗುವುದು ಎಂದರು. ಮುಂದಿನ 15 ದಿನದಲ್ಲಿ ಸಾಲ ಮನ್ನಾ ಯೋಜನೆಯನ್ನು ಅನುಷ್ಠಾನಗೊಳಿಸಿ ರೈತರ ಮನೆ ಬಾಗಿಲಿಗೆ ಋಣ ಮುಕ್ತ ಪತ್ರವನ್ನು ಕಳುಹಿಸಲಾಗುವುದು ಎಂದು ಹೇಳಿದರು.

ನಂತರ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ರಾಜ್ಯದಲ್ಲಿ ಸುಮಾರು 1ಲಕ್ಷ 14ಸಾವಿರ ಕೋಟಿ ರೈತರ ಸಾಲ ಇದೆ. ಅದರಲ್ಲಿ ಗೊಬ್ಬರ ಮಾರಾಟ ಮಾಡುವವನ ಸಾಲವೂ ಇದೆ. ಬೆಂಗಳೂರಿನಲ್ಲಿರುವ ಅಧಿಕಾರಿಗಳು ಮತ್ತು ಉದ್ಯಮಿಗಳು ಕೃಷಿ ಹೆಸರಿನಲ್ಲಿ ಕೋಟಿಗಟ್ಟಲೆ ಸಾಲ ಪಡೆದಿದ್ದಾರೆ. ಟ್ರ್ಯಾಕ್ಟರ್ ಖರೀದಿಯಲ್ಲಿ ಸಾಲ ಇದೆ. ನೂರು ಎಕರೆಯ ಕಾಫಿ ಎಸ್ಟೇಟ್ ಮಾಲೀಕರು ಮಾಡಿರುವ ಸಾಲವೂ ಇದೆ. ಈ ರೀತಿಯ ಸಾಲವನ್ನು ತೀರಿಸಬೇಕೇ ಅಥವಾ ಕೃಷಿ ಉದ್ದೇಶಕ್ಕಾಗಿ ಪಡೆದ ಸಾಲಗಳಿಗೆ ಆದ್ಯತೆ ನೀಡಬೇಕೆ ಎಂಬ ವಿಷಯಗಳ ಕುರಿತು ನಿಮ್ಮ ಸಲಹೆ ಪಡೆಯಲು ಇಂದು ಸಭೆ ಕರೆದಿದ್ದೇನೆ ಎಂದರು.

Leave a Reply

Your email address will not be published.