Breaking News

ಆರ್.ಆರ್‌. ನಗರ ವಿ,ಚುನಾವಣೆ ಕಾಂಗ್ರೆಸ್‌ನ ಮುನಿರತ್ನಗೆ ಭರ್ಜರಿ ಗೆಲುವು

ಆರ್.ಆರ್‌. ನಗರ ವಿ,ಚುನಾವಣೆ ಕಾಂಗ್ರೆಸ್‌ನ ಮುನಿರತ್ನಗೆ ಭರ್ಜರಿ ಗೆಲುವು

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು, ಕಾಂಗ್ರೆಸ್‌ನ ಮುನಿರತ್ನ ಅವರು ತಮ್ಮ ಸಮೀಪ ಪ್ರತಿಸ್ಪರ್ಧಿ ಬಿಜೆಪಿ ಪಕ್ಷದ ಮುನಿರಾಜು ಅವರನ್ನು ಸುಮಾರು 46 ಸಾವಿರಗಳ ಅಂತರದಲ್ಲಿ ಸೋಲಿಸಿದ್ದಾರೆ . ಈ ಗೆಲುವಿನೊಂದಿಗೆ ಮುನಿರತ್ನ ಎರಡನೇ ಬಾರಿ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ.

ಮೈಸೂರು ರಸ್ತೆಯ ಹಲಗೆ ವಡೇರಹಳ್ಳಿಯ ಶ್ರೀ ಜ್ಞಾನಾಕ್ಷಿ ವಿದ್ಯಾನಿಕೇತನ ಶಾಲೆಯಲ್ಲಿ ಬೆಳಿಗ್ಗೆ 8 ಗಂಟೆಗೆ ಎಣಿಕೆ ಆರಂಭವಾಯಿತು. ಇದೇ ವೇಳೆ ಮತ ಏಣಿಕೆಯ ಮೊದಲ ಸುತ್ತಿನಿಂದ ಕೂಡ ಮುನಿರತ್ನ ತಮ್ಮ ಪ್ರತಿ ಸ್ಫರ್ಧಿಗಳಿಂತ ಮುನ್ನಡೆಯನ್ನು ಕಾಯ್ದುಕೊಂಡು ಹೋಗುತ್ತಿದ್ದರು, ಕೊನೆಯದಾಗಿ ಅಂತಿಮ ಮತ ಏಣಿಕೆಯ ಬಳಿಕ ಘೋಷಣೆಯಾದ ಫಲಿತಾಂಶದ ವೇಳೆಯಲ್ಲಿ ಮುನಿರತ್ನ ಬಿಜೆಪಿ ಅಭ್ಯರ್ಥಿ ತುಳಸಿ ಮುನಿರಾಜು ಅವರನ್ನು ಸರಿ ಸುಮಾರು 46 ಸಾವಿರಕ್ಕೂ ಮತಗಳ ಅಂತರದಿಂದ ಮುನಿರತ್ನ ಅವರು ಸೋಲಿಸಿದ್ದಾರೆ.

ಕಾಂಗ್ರೆಸ್ ನ ಮುನಿರತ್ನ 80,282 ಮತಗಳನ್ನು, ಬಿಜೆಪಿಯ ತುಳಸಿ ಮುನಿರಾಜ್ ಗೌಡ 34,064 ಮತಗಳನ್ನು, ಜೆಡಿಎಸ್ ನ ರಾಮಚಂದ್ರಗೌಡ 23,256 ಮತಗಳನ್ನು ಪಡೆದುಕೊಂಡಿದ್ದಾರೆ. (ಸದ್ಯದ ಮಾಹಿತಿ ಪ್ರಕಾರ)

ಇನ್ನು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಚುನಾವಣಾ ಅಕ್ರಮ ನಡೆದಿದೆ ಎಂಬ ಕಾರಣಕ್ಕೆ ಮೇ 15ರಂದು ನಡೆಯಬೇಕಿದ್ದ ಮತದಾನವನ್ನು ಮುಂದೂಡಲಾಗಿತ್ತು. ಇದೇ 28ರಂದು ಮತದಾನ ನಡೆದಿದ್ದು, ಶೇ 54.20 ರಷ್ಟು ಮತದಾನ ನಡೆದಿತ್ತು.

ಇನ್ನು ಚುನಾವಣಾ ಕಣದಲ್ಲಿ ಮಾಜಿ ಶಾಸಕರಾದ ಕಾಂಗ್ರೆಸ್‌ನ ಮುನಿರತ್ನ, ಬಿಜೆಪಿಯ ತುಳಸಿ ಮುನಿರಾಜುಗೌಡ ಹಾಗೂ ಜೆಡಿಎಸ್‌ನ ಜಿ.ಎಚ್. ರಾಮಚಂದ್ರ, ನಟ ಹುಚ್ಚ ವೆಂಕಟ್‌ ಪಕ್ಷೇತರ ಅಭ್ಯರ್ಥಿಯಾಗಿ ತಮ್ಮ ಅದೃಷ್ಟವನ್ನು ಕಣಕ್ಕೆ ಇಳಿದಿದ್ದರು. ಇನ್ನು ರಾಜ್ಯದಲ್ಲಿ ಮೈತ್ರಿ ಸರ್ಕಾರ ರಚಿಸಿರುವ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಈ ಚುನಾವಣೆಗಳಲ್ಲಿ ಎದುರಾಳಿಗಳಾಗಿ ಸ್ಪರ್ಧೆ ಮಾಡಿದ್ದರು.

Leave a Reply

Your email address will not be published.