Breaking News

ರೈತರ ಸಾಲಮನ್ನಾಕ್ಕೆ ಪ್ಯಾನ್ ಕಾರ್ಡ್ – ಆಧಾರ್ ಕಡ್ಡಾಯ..!

ರೈತರ ಸಾಲಮನ್ನಾಕ್ಕೆ ಪ್ಯಾನ್ ಕಾರ್ಡ್ – ಆಧಾರ್ ಕಡ್ಡಾಯ..!

ಸಹಕಾರಿ ಬ್ಯಾಂಕ್‍ಗಳಿಂದ ರೈತರು ಪಡೆದಿರುವ ಬೆಳೆ ಸಾಲ ಮನ್ನಾ ಮಾಡಲು ರಾಜ್ಯ ಸರ್ಕಾರ ಈ ಬಾರಿ ಕಠಿಣ ಷರತ್ತುಗಳನ್ನು ವಿಧಿಸಲು ಮುಂದಾಗಿದೆ. ಈ ಪ್ರಕಾರ ಯಾವುದೇ ಒಬ್ಬ ರೈತ ಸಹಕಾರಿ ಬ್ಯಾಂಕ್‍ಗಳಿಂದ ಪಡೆದಿರುವ ಸಾಲ ಮನ್ನಾವಾಗಬೇಕಾದರೆ ಅಂಥ ಫಲಾನುಭವಿ ಕಡ್ಡಾಯವಾಗಿ ಆಧಾರ್ ಹಾಗೂ ಪಾನ್‍ಕಾರ್ಡ್‍ಗಳನ್ನು ಹೊಂದಿರಲೇಬೇಕು. ಒಂದು ವೇಳೆ ಇವರೆಡೂ ಇಲ್ಲದಿದ್ದರೆ ಸಾಲ ಮನ್ನಾವಾಗುವ ಖಾತ್ರಿ ಇರುವುದಿಲ್ಲ.

ಈಗಾಗಲೇ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ಹಣಕಾಸು ಇಲಾಖೆ ಅಧಿಕಾರಿಗಳೊಂದಿಗೆ ನಡೆಸಿರುವ ಮಾತುಕತೆ ಸಂದರ್ಭದಲ್ಲಿ ಕೆಲವು ನಕಲಿ ಫಲಾನುಭವಿಗಳು ಸರ್ಕಾರದ ಲಾಭ ಪಡೆಯಲು ಮುಂದಾಗುವುದನ್ನು ತಪ್ಪಿಸಲು ಸರ್ಕಾರ ಈ ಕ್ರಮ ಕೈಗೊಂಡಿದೆ. ಈ ಹಿಂದೆ ಮಹಾರಾಷ್ಟ್ರದಲ್ಲಿ ಅಲ್ಲಿನ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸಹಕಾರಿ ಬ್ಯಾಂಕ್‍ಗಳಿಂದ ರೈತರು ಪಡೆದಿರುವ ಸಾಲ ಮನ್ನಾ ಮಾಡುವಾಗ ಕಠಿಣವಾದ ಮಾರ್ಗಸೂಚಿಗಳನ್ನು ವಿಧಿಸಿದ್ದರು.

ಪಾನ್‍ಕಾರ್ಡ್ ಇಲ್ಲವೇ ಆಧಾರ್ ಕಾರ್ಡ್ ಹೊಂದಿರುವ ರೈತರ ಸಾಲಮನ್ನಾ ಮಾಡಿದ್ದರಿಂದ ಇದರ ಪ್ರಯೋಜನ ನಿಜವಾದ ಫಲಾನುಭವಿಗಳಿಗೆ ಸಿಕ್ಕಿತ್ತು. ಪಾನ್‍ಕಾರ್ಡ್‍ನಲ್ಲಿ ಫಲಾನುಭವಿಗಳ ಎಲ್ಲ ಆರ್ಥಿಕ ವ್ಯವಹಾರಗಳ ದಾಖಲೆಗಳ ಸಂಪೂರ್ಣ ಚಿತ್ರಣ ಸರ್ಕಾರಕ್ಕೆ ಲಭ್ಯವಾಗಲಿದೆ. ಅಲ್ಲದೆ ನಿಜವಾದ ಅರ್ಹರನ್ನು ಗುರುತಿಸಲು ಇದರಿಂದ ಸಾಧ್ಯವಾಗುತ್ತದೆ.

Leave a Reply

Your email address will not be published.