Breaking News

ಸಚಿವ ಸಂಪುಟ ರಚನೆ: ಯಾರಿಗೆ ಯಾವ ಖಾತೆ? ಎಲ್ಲರ ಚಿತ್ತ ಇಂದು ಸಂಜೆ ನಾಲ್ಕುವರೆಗೆ ನಡೆಯಲಿರುವ ಸುದ್ದಿಗೋಷ್ಠಿಯತ್ತ

ಸಚಿವ ಸಂಪುಟ ರಚನೆ: ಯಾರಿಗೆ ಯಾವ ಖಾತೆ? ಎಲ್ಲರ ಚಿತ್ತ ಇಂದು ಸಂಜೆ ನಾಲ್ಕುವರೆಗೆ ನಡೆಯಲಿರುವ ಸುದ್ದಿಗೋಷ್ಠಿಯತ್ತ

ಸಮ್ಮಿಶ್ರ ಸರ್ಕಾರದ ಸಚಿವರ ಆಯ್ಕೆ, ಖಾತೆ ಹಂಚಿಕೆಗೆ ಸಂಬಂದಪಟ್ಟ ಕೆಲಸ ಕೊನೆಗೂ ಮುಕ್ತಾಯವಾಗಿದೆ. ಇಂದು ಪದ್ಮನಾಭನಗರದ ಎಚ್​.ಡಿ. ದೇವೇಗೌಡರ ನಿವಾಸದಲ್ಲಿ ನಡೆದ ಸಭೆ ಉಭಯ ನಾಯಕರ ಸಭೆಯಲ್ಲಿ ಯಾರಿಗೆ ಯಾವ ಖಾತೆ ಎನ್ನುವ ವಿಷಯ ಅಂತಿಮಗೊಂಡಿದ್ದು, ಇಂದು ಸಂಜೆ ನಾಲ್ಕುವರೆಗೆ ಉಭಯ ಪಕ್ಷಗಳ ನಾಯಕರುಗಳು ಜಂಟಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಲಿದ್ದಾರೆ.

ಈ ಬಗ್ಗೆ ಇಂದು ಎಚ್​.ಡಿ. ದೇವೇಗೌಡರ ನಿವಾಸದಲ್ಲಿ ನಡೆದ ಸಭೆ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ನಾಡಿದ್ದು ಅಂದ್ರೆ ಭಾನುವಾರ ಸಮ್ಮಿಶ್ರ ಸರ್ಕಾರದ ನೂತನ ಸಚಿವ ಪ್ರಮಾಣ ವಚನಕ್ಕೆ ಸಿದ್ದತೆಯಾಗಿತ್ತು ಆದರೆ ಅಂದು ರಾಜ್ಯಪಾಲರು ಲಭ್ಯವಿರದ ಕಾರಣ ಅವರು ಬಹುಶಃ 5 ರಂದು (ಬುಧವಾರ) ಅವರು ಬೆಂಗಳೂರಿಗೆ ಬರಬಹುದು. ಬಹುಶಃ ಅಂದೇ ಸಚಿವ ಸಂಪುಟ ರಚನೆಯಾಗಬಹುದು ಅಂತ ಹೇಳಿದರು.

ಇದೇ ವೇಳೆ ಅವರು ಮಾತನಾಡಿ ಯಾವ ಪಕ್ಷಕ್ಕೆ ಯಾವ ಖಾತೆ, ಯಾರ‍್ಯಾರಿಗೆ ಯಾವ ಖಾತೆಯನ್ನು ಹಂಚಿಕೊಂಡಿದ್ದೀರಾ? ಎನ್ನುವ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು ಇಂದು ಸಂಜೆ ನಾಲ್ಕುವರೆಗೆ ಉಭಯ ಪಕ್ಷಗಳ ನಾಯಕರುಗಳು ಜಂಟಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಲಿದ್ದೇವೆ ಅಂತ ಹೇಳಿದರು.

Leave a Reply

Your email address will not be published.