Breaking News

ಕುಮಟಾದಲ್ಲಿ ವಿಜಯಾ ಬ್ಯಾಂಕ್‌ ಎಟಿಎಂ ದರೋಡೆ ಯತ್ನ

ಕುಮಟಾದಲ್ಲಿ ವಿಜಯಾ ಬ್ಯಾಂಕ್‌ ಎಟಿಎಂ ದರೋಡೆ ಯತ್ನ

ಕುಮಟಾ ತಾಲೂಕಿನ ಗುಡೇ ಅಂಗಡಿಯಲ್ಲಿ ಎಟಿಎಂ ದರೋಡೆ ಮಾಡಲು ವಿಫಲ ಯತ್ನ ನಡೆದಿದೆ. ಎಟಿಯಂ ಯಂತ್ರವನ್ನು ದರೋಡೆಕೋರರು ಜಖಂಗೊಳಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗುಡೇ ಅಂಗಡಿಯಲ್ಲಿ ಈ ಘಟನೆ ನಡೆದಿದೆ. ವಿಜಯಾ ಬ್ಯಾಂಕಿಗೆ ಸೇರಿದ ಎಟಿಎಂನಲ್ಲಿ ಈ ಘಟನೆ ನಡೆದಿದೆ. ಮಿಷನ್ ಪೂರ್ತಿ ಒಡೆದಿರುವ ದರೋಡೆಕೋರರು ಹಣ ತೆಗೆದುಕೊಂಡು ಹೋಗಲು ವಿಫಲರಾಗಿದ್ದಾರೆ. ಹಣದ ಇದ್ದ ಚೆಂಬರ್ ಒಡೆಯಲು ಪ್ರಯತ್ನ ಮಾಡುವಾಗ ವಾಹನದ ಶಬ್ದ ಕೇಳಿ ಪರಾರಿಯಾಗಿರುವ ಸಾಧ್ಯತೆ ಇದೆ. ಕುಮಟಾ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Leave a Reply

Your email address will not be published.