Breaking News

ಡಿಕೆಶಿಗೆ ಕಾಂಗ್ರೆಸ್’ನಲ್ಲಿ ಮಣೆ; ಹಿರಿಯ ನಾಯಕರಿಗೆ ಅಸಮಾಧಾನ

ಡಿಕೆಶಿಗೆ ಕಾಂಗ್ರೆಸ್’ನಲ್ಲಿ ಮಣೆ; ಹಿರಿಯ ನಾಯಕರಿಗೆ ಅಸಮಾಧಾನ

ಕರ್ನಾಟಕ ಸರ್ಕಾರ ರಚನೆಯಲ್ಲಿ ಡಿ ಕೆ ಶಿವಕುಮಾರ್ ಅವರಿಗೆ ಸಿಕ್ಕ ಪ್ರಚಾರ ಮತ್ತು ಅವರು ತಮ್ಮನ್ನು ತಾವು ಬಿಂಬಿಸಿಕೊಂಡ ಬಗೆ ಕಾಂಗ್ರೆಸ್‌ನ ಗಾಂಧಿ ಕುಟುಂಬದ ಆಪದ್ಬಾಂಧವರಾದ ಗುಲಾಂ ನಬಿ ಆಜಾದ್, ಅಶೋಕ್ ಗೆಹ್ಲೋಟ್‌ರಿಗೆ ಎಳ್ಳಷ್ಟೂ ಇಷ್ಟವಾಗಿಲ್ಲವಂತೆ.

ಸರ್ಕಾರ ರಚನೆಯಾದ ಮೇಲೆ ಕಾಂಗ್ರೆಸ್ ಕಚೇರಿಯಲ್ಲಿ ಕರ್ನಾಟಕದ ಬಗ್ಗೆ ಮಾತನಾಡಿದ ಗುಲಾಂ ನಬಿ ಆಜಾದ್ ಮೇ ೧೫ರ ಘಟನಾ ಕ್ರಮಗಳನ್ನು ವಿವರಿಸುತ್ತಾ ಸರ್ಕಾರ ರಚನೆಯಲ್ಲಿ ಡಿಕೆಶಿ ಪಾತ್ರ ಹೆಚ್ಚೇನೂ ಇರಲಿಲ್ಲ. ಶಾಸಕರು ಸ್ವಯಂಪ್ರೇರಿತರಾಗಿ ನಮ್ಮ ಜೊತೆ ಇದ್ದರು. ‘ನಮ್ಮ ಶಾಸಕರು ಮಾರಾಟಕ್ಕೆ ಇದ್ದರು, ಅವರನ್ನು ನಾನು ಹಿಡಿದುಕೊಂಡು ರಕ್ಷಿಸಿದೆ’ ಎಂದು ಡಿಕೆಶಿ ಬಿಂಬಿಸಿಕೊಂಡಿದ್ದು ಸರಿಯಲ್ಲ ಎಂದು ನೇರವಾಗಿಯೇ ಬೇಸರ ತೋಡಿಕೊಂಡಿದ್ದಾರಂತೆ.

ಅಮಿತ್ ಶಾ ಬಿಜೆಪಿ ಚಾಣಕ್ಯನಾದರೆ ಡಿಕೆಶಿ ಕಾಂಗ್ರೆಸ್ ಚಾಣಕ್ಯ ಎಂದು ಶಿವಕುಮಾರ್ ಬಣ ಹೇಳುತ್ತಿರುವುದು ಸಹಜವಾಗಿ 3–40 ವರ್ಷಗಳಿಂದ ಗಾಂಧಿ ಕುಟುಂಬಕ್ಕೆ ನಿಷ್ಠರಾದ ಮ್ಯಾನೇಜರ್‌ಗಳಿಗೆ ಅಸಮಾಧಾನ ಮೂಡಿಸಿದೆ. ಆದರೆ, ಡಿಕೆಶಿ ಇದನ್ನೆಲ್ಲ ದೀರ್ಘಾವಧಿಯನ್ನು ಗಮನದಲ್ಲಿಟ್ಟು ಮಾಡುತ್ತಿರುವಂತಿದೆ.

Leave a Reply

Your email address will not be published.