Breaking News

ಹುಬ್ಬಳ್ಳಿಯಲ್ಲಿ ರೈಲ್ವೆ ಸಂದರ್ಶನ; 20 ಹುದ್ದೆಗೆ 5000 ಆಕಾಂಕ್ಷಿಗಳು

ಹುಬ್ಬಳ್ಳಿಯಲ್ಲಿ ರೈಲ್ವೆ ಸಂದರ್ಶನ; 20 ಹುದ್ದೆಗೆ 5000 ಆಕಾಂಕ್ಷಿಗಳು

ನೈಋತ್ಯ ರೈಲ್ವೆ ವಿಭಾಗದಲ್ಲಿ ಖಾಲಿ ಇರುವ 20 ನರ್ಸಿಂಗ್ ಹುದ್ದೆಗಾಗಿ ಮಂಗಳವಾರ ನೇರ ಸಂದರ್ಶನ ನಡೆದಿದ್ದು, ರಾಜ್ಯ ಹಾಗೂ ಹೊರ ರಾಜ್ಯಗಳಿಂದ 5 ಸಾವಿರಕ್ಕೂ ಹೆಚ್ಷು ಆಕಾಂಕ್ಷಿಗಳು ಬಂದಿದ್ದರಿಂದ ರೈಲ್ವೆ ಆಸ್ಪತ್ರೆ ಆವರಣದಲ್ಲಿ ನೂಕುನುಗ್ಗಲು ಉಂಟಾಗಿದೆ.

ಸಾವಿರಾರು ಆಕಾಂಕ್ಷಿಗಳು ಒಮ್ಮೆಲೆ ಆಗಮಿಸಿದ್ದರಿಂದ ಕೆಲಕಾಲ ಸ್ಥಳದಲ್ಲಿ ಗೊಂದಲ ಉಂಟಾಗಿದ್ದು, ಸಂದರ್ಶನ ಸಾಧ್ಯವಾಗದೆ ಆಕಾಂಕ್ಷಿಗಳು ಪರದಾಡಬೇಕಾಯಿತು. ಹುಬ್ಬಳ್ಳಿಯ ಗದಗ ರಸ್ತೆಯಲ್ಲಿರುವ ರೈಲ್ವೆ ಆಸ್ಪತ್ರೆಯಲ್ಲಿ ಒಂದು ವರ್ಷ ಗುತ್ತಿಗೆ ಆಧಾರದಲ್ಲಿ ನೇರ ನೇಮಕಾತಿ ನಡೆದಿದೆ.

ನಿರೀಕ್ಷೆಗಿಂತ ಹೆಚ್ಚಿನ ಜನ ನೇಮಕಾತಿಗೆ ಬಂದಿದ್ದರಿಂದ ಸರಿಯಾದ ಮಾಹಿತಿಯಿಲ್ಲದೆ ಆಸ್ಪತ್ರೆಯ ಆವರಣ ಗೊಂದಲದ ಗೂಡಾಗಿತ್ತು. ಇದೇ ವೇಳೆ ಕೆಲವು ಆಕಾಂಕ್ಷಿಗಳು ರೈಲ್ವೆ ಆಸ್ಪತ್ರೆಯ ಸಿಬ್ಬಂದಿ ಹಾಗೂ ಆಸ್ಪತ್ರೆಯ ಅವ್ಯವಸ್ಥೆ ವಿರುದ್ಧ ಹಿಡಿಶಾಪ ಹಾಕಿದರು.

Leave a Reply

Your email address will not be published.