Breaking News

ಗಳಗಳನೆ ಕಣ್ಣೀರಿಟ್ಟ ‘ಕೈ’ ಪರಾಜಿತ ಅಭ್ಯರ್ಥಿ ಲಕ್ಷ್ಮಣ್

ಗಳಗಳನೆ ಕಣ್ಣೀರಿಟ್ಟ ‘ಕೈ’ ಪರಾಜಿತ ಅಭ್ಯರ್ಥಿ ಲಕ್ಷ್ಮಣ್

ಮೈಸೂರು: ಪರಿಷತ್ ಗೆ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಜಿತರಾಗಿರುವ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ ತಮಗೆ ಮತಹಾಕಿದ ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸಿ ಸೋತಿದಕ್ಕೆ ಗಳಗಳನೆ ಕಣ್ಣೀರಿಟ್ಟರು.ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಕೈ ಪರಾಜಿತ ಅಭ್ಯರ್ಥಿ ಲಕ್ಷ್ಮಣ್, ತಮಗೆ ಮತ ಹಾಕಿದ ಮತದಾರರಿಗೆ ಮಂಡಿಯೂರಿ ನಮಸ್ಕರಿಸಿ ಕೃತಜ್ಞತೆ ಸಲ್ಲಿಸಿದರು. ಬಳಿಕ ಗೋಷ್ಟಿಯುದ್ದಕ್ಕೂ‌ ಕಣ್ಣೀರಿಡುತ್ತಲೇ ಮಾತನಾಡಿದ ಲಕ್ಷ್ಮಣ್, ನಾನು ಕಳೆದ 6 ವರ್ಷಗಳಿಂದ ಶಿಕ್ಷಕರ ಪರವಾಗಿ ಹೋರಾಟ ಮಾಡುತ್ತಾ ಬಂದಿದ್ದೆ. ನಾನು ಸೋತಿದ್ದರೂ ಕೂಡಾ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸಲು ಸದಾ ಸಿದ್ದ. ಇದು ಸಮ್ಮಿಶ್ರ ಸರ್ಕಾರ. ಇದರಲ್ಲೇನಾದರೂ ನಮ್ಮನ್ನು ಕಡೆಗಣಿಸಿ ಏಕ ಪಕ್ಷೀಯ ನಿರ್ಧಾರ ಕೈಗೊಂಡರೆ ಉಗ್ರ ಹೋರಾಟ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದರು.ನಾನು ಹೋರಾಟ ಮಾಡುವ ವಿಷಯವನ್ನ ಸಿದ್ದರಾಮಯ್ಯನವರ ಗಮನಕ್ಕೆ ತಂದಿದ್ದೇನೆ. ಹೋರಾಟ ಮಾಡಲು ನನಗೆ ಅನುಮತಿ ಸಿಕ್ಕಿದೆ. ಜಾತಿ ಆಧಾರದ ಮೇಲೆ ಮತಗಳ ವಿಂಗಡಣೆ ತುಂಬಾ ನೋವು ತಂದಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಲಕ್ಷ್ಮಣ್ ಕಣ್ಣೀರಿಟ್ಟರು.ಕೊನೆಗೆ ಮತನೀಡಿದ ಶಿಕ್ಷಕರಿಗೆ ಕೃತಜ್ಞತೆ ತಿಳಿಸಿ ಮಂಡಿಯೂರಿ ನಮಸ್ಕರಿಸಿ ಅಳುತ್ತ ಪತ್ರಿಕಾಗೋಷ್ಠಿಯಿಂದ ಹೊರನಡೆದರು.

Leave a Reply

Your email address will not be published.