Breaking News

ಪೋಲೀಸ್ ಠಾಣೆಯಲ್ಲಿ ಸಾರ್ವಜನಿಕ ಸಭೆ

ಪೋಲೀಸ್ ಠಾಣೆಯಲ್ಲಿ ಸಾರ್ವಜನಿಕ ಸಭೆ

ಮೈಸೂರು:ಇಂದು ಲಕ್ಮೀಪುರಂ ಪೋಲೀಸ್ ಠಾಣೆ ಯ ಸಾರ್ವಜನಿಕ ಸಭೆ ಕರೆಯಲಾಯಿತು ಠಾಣೆ ಯ ವ್ಯಾಪ್ತಿಗೆ ಬರುವ ವಾರ್ಡ್ ನಂಬರ್,೩ ಮತ್ತು೨ ರ ಅಸುಪಾಸಿನ ಲಕ್ಮೀಪುರಂ,ಚಾಮರಾಜಪುರಂ,ಗೀತಾ ರಸ್ತೆ ,ದಿವಾನ್ ರಸ್ತೆ, ಡಿ,ಸುಬ್ಬಯ್ಯ ರಸ್ತೆ,ಕುಂಬಾರ ಗೇರಿ, ರೆಹಮಾನಿಯ ಬೀದಿಯ ಸುತ್ತಮುತ್ತ ದ ಭಾಗದ ಜನ ಸಾಮನ್ಯರು ಇದ್ದರು,,

ಬೆಳ್ಳಗೆ 11 ಗಂಟೆ ಗೆ ಪ್ರಾರಂಭ ವಾದ ಲಕ್ಮೀಪುರಂ ಆರಕ್ಷಕ ಠಾಣೆ ಯ ಇನ್ ಪೆಕ್ಟರ್ ಕೆ.ಎಂ.ಮಾದ ಶೆಟ್ಟಿ ರವರು ಸಭೆಯಲ್ಲಿ ಮುಂಬರುವ ರಂಜಾನ್ ಹಬ್ಬವನ್ನು ಎಲ್ಲಾ ಸಮಾಜದವರು ಸೌಹಾರ್ದ ಯುತ ವಾಗಿ ಇದ್ದು ಆಚರಣೆ ಮಾಡಬೇಕು ಮತ್ತು ಸಾರ್ವಜನಿಕ ಸಭೆ ಸಮಾರಂಭ,ಸಾರ್ವಜನಿಕ ಸ್ಥಳಗಳಲ್ಲಿ ಕಾನೂನು ಸಂರಕ್ಷಣೆ, ಕಾನೂನು ಸುವ್ಯವಸ್ಥೆ ಯ ಬಗ್ಗೆ ಸಾರ್ವಜನಿಕ ರಿಗೆ ಅರಿವು ಮೂಡಿಸುವ ಬಗ್ಗೆ, ಮಹಿಳೆಯರಿಗೆ ಮತ್ತು ಮಕ್ಕಳಿಗೆ ಕಾನೂನು ಅರಿವು,ಮಹಿಳೆಯರು ಚಿನ್ನವನ್ನು ಮಿತವಾಗಿಪ್ರದರ್ಶಶಿವ ಬಗ್ಗೆ ಅರಿವು, ಠಾಣೆಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಪಾರ್ಕ್ ಗಳಗೆ ಭದ್ರತೆ,ಬೆಳ್ಳಗೆ ವಾಯವಿಹಾರಕ್ಕೆ ಬರುವ ಸಾರ್ವಜನಿಕ ರಿಗೆ ಭದ್ರತೆ,ರಾತ್ರಿ ಪಾಳಿಯಲ್ಲಿ ಸಾರ್ವಜನಿಕರೊಂದಿಗೆ ಗಸ್ತು ತಿರುಗುವ ಬಗ್ಗೆ ತಿಳಿಸಿ ಸಾರ್ವಜನಿಕರು ಮತ್ತು ಇಲಾಖೆಯ ಎಲ್ಲ ಸಿಬ್ಬಂದಿ ವರ್ಗದವರು ಒಂದು ಕುಟುಂಬದ ರೀತಿಯಲ್ಲಿ ಇದ್ದರೆ ಅಪರಾಧ ವನ್ನು ತಡೆಯಲು ಯಶಸ್ವಿಯಾಗಬಹುದು ಹಾಗೆ ಈ ಭಾಗದ ಯುವಕರು ಹೆಲ್ಮಟ್ ಕಡ್ಡಾಯ ವಾಗಿ ಉಪಯೊಗಿಸಿ,ಯುವಕರು ವಾಹನ ಚಾಲನೆ ಮಾಡುವ ನೆಪದಲ್ಲಿ ವಿಲಿಂಗ್ ಮಾಡುವುದನ್ನು ನಿಲ್ಲಿಸಬೇಕು ಎಂದು ಅಭಿಪ್ರಾಯ ಪಟ್ಟರು..

ಸಾರ್ವಜನಿಕ ವಾಗಿ ಸಮಾಜ ಸೇವಕ ಜೋಗಿ ಮಂಜು ಮಾತನಾಡಿ ಲಕ್ಮೀಪುರಂ, ಗೀತಾರಸ್ತೆ,ಚಾಮರಾಜ ಪುರಂ ನ ಬಾಗ ಹೆಚ್ಚು ಪಾರ್ಕುಗಳ ಕಡೆ ಹೆಚ್ಚಿನ ಗಸ್ತು ಇದ್ದರೆ ಉಪಯೋಗ ವಾಗುತ್ತದೆ ಮತ್ತು ಸಿದ್ದಪ್ಪ ವೃತ್ತದ ಬಳಿ ಬಾರ್,ಮತ್ತು ವೈನ್ ಸ್ಟೊರ್ ಗಳಿದ್ದು ಇಲ್ಲಿ 10 ಗಂಟೆಗ ಕಡ್ಡಾಯವಾಗಿ ಮುಚ್ಚಬೇಕೆಂದು ತಿಳಿಸಬೇಕಾಗಿ ವೃತ್ತ ನಿರೀಕ್ಷಕರಿಗೆ ಮನವಿ ಮಾಡಿದರು.

ಈ ಸಂಧರ್ಭದಲ್ಲಿ ವೃತ್ತ ನೀರಿಕ್ಷಕರಾದ ಕೆ.ಎಂ.ಮಾದಶೆಟ್ಟಿ,ಜೋಗಿ ಮಂಜು, ನಾಸಿರ್,ಕುಮಾರ್,ಠಾಣಾ ಸಿಬ್ಬಂದಿ ಕುಮಾರ್, ರಫಿಕ್,ಶರತ್,ಸಿದ್ದೀಕಿ,ಕಲೀಂಷರಿಫ್,ಅಸ್ಲಂ ಪಾಷ,ಜಾಕೀರ್ ಮುಂತಾದವರು ಇದ್ದರು

Leave a Reply

Your email address will not be published.