Breaking News

ಜೂನ್ 18 ರಿಂದ ವಾಣಿಜ್ಯಶಾಸ್ತ್ರ ತರಬೇತಿ ಕಾರ್ಯಾಗಾರ

ಜೂನ್ 18 ರಿಂದ ವಾಣಿಜ್ಯಶಾಸ್ತ್ರ ತರಬೇತಿ ಕಾರ್ಯಾಗಾರ

ಮೈಸೂರು:ಮೈಸೂರು ಜಿಲ್ಲೆಯ ಸರ್ಕಾರಿ ಮತ್ತು ಅನುದಾನಿತ ಪದವಿಪೂರ್ವ ಕಾಲೇಜುಗಳ ವಾಣಿಜ್ಯಶಾಸ್ತ್ರ ವಿಷಯದ ಉಪನ್ಯಾಸಕರುಗಳಿಗೆ ವಿಷಯಾಧಾರಿತ ತರಬೇತಿ ಕಾರ್ಯಾಗಾರ ಜೂನ್ 18 ರಿಂದ 24 ರವರೆಗೆ ನಂಜನಗೂಡು ಸುತ್ತೂರಿನ ಶ್ರೀ ಸಿದ್ದನಂಜ ದೇಶಿಕೇಂದ್ರ ಮಂಗಳ ಮಂಟಪದಲ್ಲಿ ಆಯೋಜಿಸಿದೆ.
ಈ ಕಾರ್ಯಾಗಾರಕ್ಕೆ ಸಂಬಂಧಿಸಿದ ಉಪನ್ಯಾಸಕರನ್ನು ಬಿಡುಗಡೆ ಮಾಡುವಂತೆ ಪ್ರಾಂಶುಪಾಲರುಗಳಿಗೆ ಪದವಿಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆ ಉಪನಿದೇಶಕರು ತಿಳಿಸಿದ್ದಾರೆ.ಸಂಬಂಧಪಟ್ಟ ಉಪನ್ಯಾಸಕರುಗಳು ಕಡ್ಡಾಯವಾಗಿ ಬಿಡುಗಡೆ ಪತ್ರ, ವೈಯುಕ್ತಿಕ ಬ್ಯಾಂಕ್ ಖಾತೆಯ ವಿವರದ ಪ್ರತಿ, ಐಎಫ್‍ಎಸ್‍ಸಿ ಸಂಖ್ಯೆ ವಿವರ ಮತ್ತು ಎಂ.ಐ.ಸಿ.ಆರ್ ಕೋಡ್‍ನೊಂದಿಗೆ, ಕೆಜಿಐಡಿ ಸಂಖ್ಯೆ, ಪಾನ್‍ಕಾರ್ಡ್, ಆಧಾರ್‍ಕಾರ್ಡ್ ಪ್ರತಿ,ದಾಖಲಾತಿಯ ವಿವರವನ್ನು ಜೊತೆಯಲ್ಲಿ ತರಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published.