Breaking News

ಚಾಮರಾಜ ಕ್ಷೇತ್ರದ ಶಾಸಕ ನಾಗೇಂದ್ರ ಚೆಲುವಾಂಬಾ ಆಸ್ಪತ್ರೆಗೆ ದಿಢೀರ್ ಭೇಟಿ

ಚಾಮರಾಜ ಕ್ಷೇತ್ರದ ಶಾಸಕ ನಾಗೇಂದ್ರ ಚೆಲುವಾಂಬಾ ಆಸ್ಪತ್ರೆಗೆ  ದಿಢೀರ್ ಭೇಟಿ

ಮೈಸೂರು:ನಗರದ ಕೆ.ಆರ್.ಆಸ್ಪತ್ರೆಯ ಚೆಲುವಾಂಬಾ ಆಸ್ಪತ್ರೆಗೆ ಚಾಮರಾಜ ಕ್ಷೇತ್ರದ ಶಾಸಕ ನಾಗೇಂದ್ರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಹಲವು ದಿನಗಳ ಹಿಂದೆ ಮಾಧ್ಯಮಗಳು ಬಾಣಂತಿಯರಿಗೆ ಕೆ.ಆರ್.ಆಸ್ಪತ್ರೆಯಲ್ಲಿ ಬಾಣಂತಿಯರಿಗೆ ಹಾಸಿಗೆಯ ಕೊರತೆ ಎಂದು ವರದಿ ಮಾಡಿದ್ದು, ಶಾಸಕರು ದಿಢೀರನೆ ಭೇಟಿ ನೀಡಲಾಗಿ ಅವರಿಗೂ ಬಾಣಂತಿಯರು ನೆಲದ ಮೇಲೆಯೇ ಹಾಸಿಗೆಯಲ್ಲಿ ಮಲಗಿರುವುದು ಕಾಣ ಸಿಕ್ಕಿದೆ. ಕೂಡಲೇ ಅವರು ಆಸ್ಪತ್ರೆಯ ಮೇಲ್ವಿಚಾರಕರು ಎಲ್ಲಿ ಎಂದು ಪ್ರಶ್ನಿಸಿದ್ದು ತರಾಟೆಗೆ ತೆಗೆದುಕೊಂಡಿದ್ದಾರೆ. ಇದೇನ್ರಿ ಬಾಣಂತಿಯರನ್ನು ನೆಲದ ಮೇಲೆ ಹಾಸಿಗೆ ಹಾಸಿ ಮಲಗಿಸಿದ್ದೀರಿ, ನಿಮಗೆ ಸ್ವಲ್ಪನೂ ಜ್ಞಾನ ಇಲ್ಲವೇನ್ರಿ, ಮಳೆಗಾಲವಾದ್ದರಿಂದ ಥಂಡಿ ಹಿಡಿದುಕೊಳ್ಳತ್ತೆ ಇದರಿಂದ ತಾಯಿ ಮಗು ಇಬ್ಬರಿಗೂ ಇನ್ಫೆಕ್ಷನ್ ಆಗೋ ಸಾಧ್ಯತೆಯೇ ಹೆಚ್ಚು ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಮೇಲ್ವಿಚಾರಕರು ಸ್ಥಳದಲ್ಲಿರದ ಕಾರಣ ಅವರ ಕುರಿತು ಆರೋಗ್ಯಾಧಿಕಾರಿಯವರಲ್ಲಿ ಕ್ರಮ ತೆಗೆದುಕೊಳ್ಳಲು ತಿಳಿಸುವುದಾಗಿ ಹೇಳಿದರು. ಇದೇ ವೇಳೆ ಆಸ್ಪತ್ರೆಯಲ್ಲಿ ಅಶುಚಿತ್ವ ಕಂಡು ಬಂದಿದ್ದು, ನಮ್ಮ ನಿರೀಕ್ಷೆಯಂತೆ ಆಸ್ಪತ್ರೆಯಲ್ಲಿ ಸ್ವಚ್ಛತೆ ಕಂಡು ಬರುತ್ತಿಲ್ಲ. ಆಸ್ಪತ್ರೆಯಲ್ಲಿ ಸ್ವಚ್ಛತೆ ಕಾಯ್ದುಕೊಳ್ಳಿ ಇಲ್ಲದಿದ್ದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

Leave a Reply

Your email address will not be published.