Breaking News

ಕೃಷ್ಣರಾಜೇಂದ್ರರ ಪುತ್ಥಳಿಗೆ ಶಾಸಕ ಎಲ್.ನಾಗೇಂದ್ರ ಪುಷ್ಪಾರ್ಚನೆ

ಕೃಷ್ಣರಾಜೇಂದ್ರರ ಪುತ್ಥಳಿಗೆ ಶಾಸಕ ಎಲ್.ನಾಗೇಂದ್ರ ಪುಷ್ಪಾರ್ಚನೆ

ಮೈಸೂರು:ನಗರದ ಅಗ್ರಹಾರದ ಬಳಿ ಇರುವ ಮಾಧವ ರಾವ್ ವೃತ್ತದಲ್ಲಿ ಕೃಷ್ಣರಾಜೇಂದ್ರ ಸಹಕಾರ ಬ್ಯಾಂಕಿನ 99ನೇ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ಇಂದು ಕೃಷ್ಣರಾಜೇಂದ್ರರ ಪುತ್ಥಳಿಗೆ ಶಾಸಕ ಎಲ್.ನಾಗೇಂದ್ರ ಪುಷ್ಪಾರ್ಚನೆ ಗೈದು ಗೌರವ ಅರ್ಪಿಸಿದರು.ಬಳಿಕ ಮಾತನಾಡಿದ ಅವರು ಬಡವರ ಕಲ್ಯಾಣಕ್ಕಾಗಿ ಸ್ಥಾಪನೆಯಾದ ಈ ಬ್ಯಾಂಕಿನಿಂದ ಹಲವಾರು ಮಂದಿ ಪ್ರಯೋಜನ ಪಡೆದುಕೊಂಡಿದ್ದಾರೆ ಎಂದರು.
ಈ ಸಂದರ್ಭ ಅಧ್ಯಕ್ಷ ವಾಸು, ಭಾಸ್ಕರ್, ಪ್ರತಿಧ್ವನಿ ಪ್ರಸಾದ್ ಮತ್ತಿತರ ಸಿಬ್ಬಂದಿಗಳು ಉಪಸ್ಥಿತರಿದ್ದರು. 30-6-1919ರಲ್ಲಿ ಬ್ಯಾಂಕ್ ನ್ನು ಶೆಟ್ಟಪ್ಪ ಸಿದ್ದಪ್ಪ ಮತ್ತು ಅವರ ಸಹಪಾಠಿಗಳು ಸ್ಥಾಪಿಸಿದ್ದು, ಸುಲಭ ಕಂತುಗಳಲ್ಲಿ ಕಡಿಮೆ ಬಡ್ಡಿದರದಲ್ಲಿ ಸಾಲ, ತೀರುವಳಿಗೆ ಅವಕಾಶ ಕಲ್ಪಿಸಲಾಯಿತು. 1919ರಲ್ಲಿ 265ಸದಸ್ಯರಿಂದ ಪ್ರಾರಂಭವಾಗಿ ಇಂದು 9313 ಸದಸ್ಯರನ್ನು ಹೊಂದಿದೆ. 2017-18ನೇ ಸಾಲಿಗೆ ನಿವ್ವಳ ಎನ್ ಪಿಎ ಶೇ.0, ಸಿಆರ್ ಎಆರ್ ಶೇ.14.56 ಇದ್ದು, ಬ್ಯಾಂಕ್ ಉತ್ತಮ ಸ್ಥಿತಿಯಲ್ಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಭದ್ರತಾ ಪತ್ರಗಳಲ್ಲಿ 12.30ಕೋ.ರೂ.ಹೂಡಿಕೆ ಮಾಡಿದೆ. ಪ್ರಸಕ್ತ ಸಾಲಿನಲ್ಲಿ 41.77ಲಕ್ಷ ನಿವ್ವಳ ಲಾಭಗಳಿಸಿದೆ.

Leave a Reply

Your email address will not be published.