Breaking News

ವಾಟ್ಸ್ ಅಪ್‌ನಲ್ಲಿ ತನ್ನ ಸಾವಿನ ಸುಳಿವು ನೀಡಿ ವ್ಯಕ್ತಿಯೊಬ್ಬ ಕಾಣೆ

ವಾಟ್ಸ್ ಅಪ್‌ನಲ್ಲಿ ತನ್ನ ಸಾವಿನ ಸುಳಿವು ನೀಡಿ ವ್ಯಕ್ತಿಯೊಬ್ಬ ಕಾಣೆ

ಮೈಸೂರು:ವಾಟ್ಸ್ ಅಪ್‌ನಲ್ಲಿ ತನ್ನ ಸಾವಿನ ಸುಳಿವು ನೀಡಿ ವ್ಯಕ್ತಿಯೊಬ್ಬ ಕಾಣೆಯಾಗಿರುವ ಘಟನೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ರಾವಂದೂರು ಗ್ರಾಮದಲ್ಲಿ ನಡೆದಿದೆ. ರಾವಂದೂರು ಗ್ರಾಮದ ಬಟ್ಟೆ ಮತ್ತು ಚಿನ್ನಬೆಳ್ಳಿ ವ್ಯಾಪಾರಿ ಸುಖಾಲಾಲ್ ಅಲಿಯಾಸ್ ಸುರೇಶ್ ಎಂಬಾತನೆ ಕಾಣೆಯಾಗಿರುವಾತ. ಈತ ಕಳೆದ ಹಲವಾರು ವರ್ಷಗಳಿಂದ ಪರ್ವಿನ್ ಎಂಬ ಹೆಸರಿನಲ್ಲಿ ಟೆಕ್ಸ್‌ಟೈಲ್ಸ್ ಮತ್ತು ಜುವೆಲರ್‍ಸ್ ಅಂಗಡಿಯನ್ನು ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದಾದ್ದು. ಈತನಿಗೆ ಐಶ್ವರ್ಯ(೧೦), ಅನುಷಾ(೯), ರಾಶಿ (೬), ಮತ್ತು ಮುಖೇಶ್ (೧) ಎಂಬ ನಾಲ್ಕು ಮಂದಿ ಮಕ್ಕಳಿದ್ದಾರೆ. ಜು.೭ರಂದು ಬೆಳಿಗ್ಗೆ ಮಕ್ಕಳನ್ನು ಕಾನ್ವೆಂಟ್‌ಗೆ ಬಿಟ್ಟು ಹಾಗೆ ಮೈಸೂರಿನ ಕೋರ್ಟ್‌ಗೆ ಹೋಗಿ ಬರುತ್ತೇನೆಂದು ಹೇಳಿ ಹೋದವರು ಮರಳಿಲ್ಲ. ಪೋನ್‌ಕೂಡ ರಿಸೀವ್ ಮಾಡಿಲ್ಲ ಜು.೮ರಂದು ಸಂಜೆ ೪ ಗಂಟೆಗೆ ಪತ್ನಿ ಸುನಿತಾ ಮೊಬೈಲ್‌ಗೆ ವಾಟ್ಸ್ ಅಪ್‌ನಲ್ಲಿ ವಿಡಿಯೋ ಅಪ್‌ಲೋಡ್ ಮಾಡಿದ್ದಾನೆ.
ಸ್ವಾಮಿ ಮಾಸ್ಟರ್ ಎಂಬುವವರು ನನ್ನ ಮನೆ ಮತ್ತು ಗೋಡನ್ ಬರೆಸಿಕೊಂಡು ನಾನು ಅವರಿಗೆ ೧೧ ಲಕ್ಷ ಹಣ ಕೊಡಬೇಕಿತ್ತು ಇದಕ್ಕಾಗಿ ಎಲ್ಲಾ ಬರೆಸಿಕೊಂಡು ಉಳಿಕೆ ಹಣವನ್ನು ನೀಡುತ್ತೇನೆ ಎಂದು ನೀಡದೆ ಮೋಸ ಮಾಡಿದ್ದಾರೆ. ಇದರಿಂದ ಬೇಸರವಾಗಿ ಹೋಗುತ್ತಿದ್ದೇನೆ ಎಂಬುದಾಗಿ ತಿಳಿಸಿದ್ದಾರೆ ಎಂದು ಪತ್ನಿ ಸುನಿತಾ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಈತ ಅಪ್‌ಲೋಡ್ ಮಾಡಿರುವ ವಿಡಿಯೋದಲ್ಲಿ ಮಾಸ್ಟರ್ ಎಂಬವವರು ನನ್ನ ಮನೆ ಗೋಡಾನ್ ಬರೆಸಿಕೊಂಡು ತಮಗೆ ಮೋಸಮಾಡಿದ್ದು ಇದರಿಂದ ಮನನೊಂದಿದ್ದು ತಾನು ಬದುಕುವುದಿಲ್ಲ ಎಂಬ ನಿರ್ಧಾರಕ್ಕೆ ಬಂದು ದೂರ ಬಂದಿರುವುದಾಗಿ ಹೇಳಿಕೆ ನೀಡಿದ್ದಾನೆ.
ಈ ಸಂಬಂಧ ಪಿರಿಯಾಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ಧಾರೆ. ಕಾಣೆಯಾಗಿರುವಾತನ ಬಗ್ಗೆ ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published.