Breaking News

ಬೀದಿಬದಿ ವ್ಯಾಪಾರಿಗಳ ಸಮೀಕ್ಷೆ

ಬೀದಿಬದಿ ವ್ಯಾಪಾರಿಗಳ ಸಮೀಕ್ಷೆ

ಮೈಸೂರು:ಮೈಸೂರು ಮಹಾನಗರ ಪಾಲಿಕೆಯು ಡೇ-ನಲ್ಮ್ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದ್ದು ಬೀದಿಬದಿ ವ್ಯಾಪಾರಿಗಳ ಬೆಂಬಲ ಯೋಜನೆಯಡಿ ಬೀದಿಬದಿ ವ್ಯಾಪಾರಿಗಳ ಸಮೀಕ್ಷೆಯನ್ನು ನಡೆಸಲು ಉದ್ದೇಶಿಸಲಾಗಿದೆ.
ಡೇ-ನಲ್ಮ್ ಯೋಜನೆಯ ಸ್ವ-ಸಹಾಯ ಸಂಘದ ಮಹಿಳಾ ಸದಸ್ಯರುಗಳಿಂದ ನಿಯಮಾನುಸಾರ ರಚಿಸಲ್ಪಟ್ಟು ನೋಂದಾಯಿತ ಪ್ರದೇಶ ಮಟ್ಟದ ಒಕ್ಕೂಟದ ಸದಸ್ಯರುಗಳು ಕೈಗೊಳ್ಳುತ್ತಿದ್ದು,ಪಾಲಿಕೆಯ ಸಿಬ್ಬಂದಿಗಳಾದ ಆರೋಗ್ಯ ನಿರೀಕ್ಷಕರು/ಸಮುದಾಯದ ಸಂಘಟಕರು ಸದರಿ ಸಮೀಕ್ಷೆಯ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಸಮೀಕ್ಷಾ ತಂಡವು ನಿಗಧಿತ ನಮೂನೆ /ಫಾರಂನಲ್ಲಿರುವ ಕಾಲಂಗಳ ಅನುಸಾರ ಮಾಹಿತಿಯನ್ನು ಕ್ರೂಢೀಕರಿಸುವ ಉದ್ದೇಶ ಹೊಂದಿರುತ್ತದೆ.
ಬೀದಿಬದಿ ವ್ಯಾಪಾರಿಗಳು ಚುನಾವಣೆ ಗುರುತಿನ ಚೀಟಿ, ಬಿಪಿಎಲ್ ಕಾರ್ಡ್, ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ, ಬ್ಯಾಂಕ್ ಪಾಸ್ ಪುಸ್ತಕ ಮತ್ತು ಇನ್ನಿತರ ದಾಖಲೆಗಳ ನಕಲು ಪ್ರತಿ ಹಾಗೂ ವೈಯಕ್ತಿಕ ಮತ್ತು ಕುಟುಂಬದ ಸದಸ್ಯರು ಒಟ್ಟಾಗಿರುವ ಭಾವಚಿತ್ರ ಸಲ್ಲಿಸುವಂತೆ ಮೈಸೂರು ಮಹಾನಗರ ಪಾಲಿಕೆಯ ಹೆಚ್ಚುವರಿ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published.