Breaking News

ಅರಿವು ಸಾಲ : ಅರ್ಜಿ ಆಹ್ವಾನ

ಅರಿವು ಸಾಲ : ಅರ್ಜಿ ಆಹ್ವಾನ

ಮೈಸೂರು: ಅರಿವು ಶೈಕ್ಷಣಿಕ ಸಾಲ ಯೋಜನೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ ಮೂಲಕ ಪ್ರವೇಶಾತಿ ಪಡೆಯುವ ವೃತ್ತಿಪರ ಕೋರ್ಸ್‍ಗಳಲ್ಲಿ ವ್ಯಾಸಂಗ ಮಾಡುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಾರ್ಷಿಕ ಶೇ.2ರ ಬಡ್ಡಿದರದಲ್ಲಿ ವಾರ್ಷಿಕ ಗರಿಷ್ಠ ರೂ. 1.00 ಲಕ್ಷಗಳವರೆಗೆ ಸಾಲ ಮಂಜೂರು ಮಾಡಲಾಗುತ್ತದೆ.
2018-19ನೇ ಸಾಲಿನಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಡಿಪ್ಲೋಮೊ ಲ್ಯಾಟರಲ್ ಎಂಟ್ರಿ (ಇಂಜಿನಿಯರಿಂಗ್ ಕೋರ್ಸ್‍ಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಮಾತ್ರ) ಪಿ.ಜಿ ಕೋರ್ಸ್‍ಗಳಾದ, ಎಂ.ಬಿ.ಎ, ಎಂ.ಸಿ.ಎ, ಎಂ.ಟೆಕ್,ಎಂ.ಇ, ಕೋರ್ಸ್‍ಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ ಮೂಲಕ ಆಯ್ಕೆಯಾಗಿ ಸಾಲ ಪಡೆಯ ಬಯಸುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಸಿ.ಇ.ಟಿಗೆ ಪಾವತಿಸಬೇಕಾದ ಶುಲ್ಕವನ್ನು ಸಿ.ಇ.ಟಿ ಯಿಂದ ಸೀಟು ಪಡೆಯುವ ಹಂತದಲ್ಲಿಯೇ ನಿಗಮದಿಂದ ಸಾಲ ಮಂಜೂರು ಮಾಡಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಶುಲ್ಕ ಹೊಂದಾಣಿಕೆ ಮಾಡಲಾಗುತ್ತದೆ.
2018-19ನೇ ಸಾಲಿನಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ/ಸಿ.ಇ.ಟಿ. ಮೂಲಕ ಸೀಟು ಪಡೆದು ಡಿಪ್ಲೋಮೊ ಲ್ಯಾಟರಲ್ ಎಂಟ್ರಿ (ಇಂಜಿನಿಯರಿಂಗ್ ಕೋರ್ಸ್‍ಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಮಾತ್ರ) ಪಿ.ಜಿ ಕೋರ್ಸ್‍ಗಳಾದ, ಎಂ.ಬಿ.ಎ, ಎಂ.ಸಿ.ಎ,ಎಂ.ಟೆಕ್, ಎಂ.ಇ, ಕೋರ್ಸ್‍ಗಳಿಗೆ ವ್ಯಾಸಂಗ ಮಾಡಲು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಅರಿವು ಶೈಕ್ಷಣಿಕ ಸಾಲ ಯೋಜನೆಯಲ್ಲಿ ಸಾಲ ಪಡೆಯಬಯಸುವ ಹಿಂದುಳಿದ ವರ್ಗಗಳ ಪ್ರ-1, ಪ್ರ-2ಎ, ಪ್ರ-3ಎ ಮತ್ತು ಪ್ರ-3ಬಿ ಗೆ ಸೇರಿದ್ದು,(ವಿಶ್ವಕರ್ಮ ಮತ್ತು ಉಪ ಜಾತಿಗಳು, ಅಲ್ಪ ಸಂಖ್ಯಾತರು ಮತ್ತು ಅದರ ಉಪಜಾತಿಗಳನ್ನು ಹೊರತುಪಡಿಸಿ) ವಿದ್ಯಾರ್ಥಿ ಮತ್ತು ಕುಟುಂಬದ ವಾರ್ಷಿಕ ವರಮಾನ ರೂ. 3.50 ಲಕ್ಷಗಳ ಮಿತಿಯಲ್ಲಿರುವ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆನ್‍ಲೈನ್ ಮುಲಕ ಆಹ್ವಾನಿಸಲಾಗಿದೆ.
ಸ್ವೀಕೃತಗೊಂಡ ಅರ್ಜಿಗಳನ್ನು ಅನುದಾನ ಲಭ್ಯತೆ, ಸರ್ಕಾರದ ಅದೇಶದನ್ವಯ ಪ್ರವರ್ಗವಾರು 70:30ರ ಅನುಪತ ಹಾಗೂ ರ್ಯಾಂಕ್‍ವಾರು ಪರಿಗಣಿಸಿ ಆಯ್ಕೆ ಮಾಡಲಾಗುವುದು.
ಸಾಲ ಪಡೆಯಲು ಇಚ್ಛಿಸುವ ವಿದ್ಯಾರ್ಥಿಗಳು ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವೆಬ್‍ಸೈಟ್ www.karnataka.gov.in/dbcdc ರಲ್ಲಿ
ಲಾಗಿನ್ ಆಗಿ ವೆಬ್‍ಸೈಟ್‍ನಲ್ಲಿ ಲಭ್ಯವಿರುವ Username infra\dbcdcarivu ªÀÄvÀÄÛ Passward DB(d#098 £ÀÄß ನ್ನು ನಮೂದಿಸಿ ಅರ್ಜಿಯನ್ನು ಆನ್‍ಲೈನ್‍ಲ್ಲಿ ಭರ್ತಿಮಾಡುವುದು. ಈ ಕೆಳಕಂಡ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅರ್ಜಿಯೊಂದಿಗೆ ಆನ್‍ಲೈನ್‍ನಲ್ಲಿ ದಿನಾಂಕ: 31.07.2018 ರೊಳಗೆ ಸಲ್ಲಿಸುವುದು.
ಅರಿವು ಶೈಕ್ಷಣಿಕ ಸಾಲ ಯೋಜನೆಯಲ್ಲಿ ಸಿ.ಇ.ಟಿ ಮೂಲಕ ಪ್ರವೇಶಾತಿ ಪಡೆಯುವ ವೃತ್ತಿಪರ ಕೋರ್ಸ್‍ಗಳನ್ನು ಹೊರತುಪಡಿಸಿದ ಕೋರ್ಸ್‍ಗಳಾದ ಪಿ.ಹೆಚ್.ಡಿ,ಬಿ.ಸಿ.ಎ/ಎಂ,ಸಿ.ಎ, ಎಂ.ಎಸ್.ಅಗ್ರಿಲಕ್ಚರ್, ಬಿ.ಎಸ್ಸಿ.ನರ್ಸಿಂಗ್, ಬಿ.ಎಸ್ಸಿ ಪ್ಯಾರಾ ಮೆಡಿಕಲ್, ಬಿ.ಎಸ್ಸಿ ಬಯೋ ಟೆಕ್ನಾಲಜಿ, ಬಿ.ಟೆಕ್, ಬಿ.ಪಿ.ಟಿ, ಜಿ.ಎನ್.ಎಂ,ಬಿ.ಹೆಚ್.ಎಂ, ಎಂ.ಡಿ.ಎಸ್, ಎಂ.ಎಸ್.ಡಬ್ಲ್ಯೂ, ಎಲ್.ಎಲ್.ಎಂ, ಎಂ.ಎಫ್.ಎ, ಎಂ.ಎಸ್ಸಿ ಎಜಿ ಈ ಕೋರ್ಸ್‍ಗಳಿಗೆ 2018-19ನೇ ಸಾಲಿನಲ್ಲಿ ಪ್ರಥಮ ವರ್ಷಕ್ಕೆ ಸರ್ಕಾರಿ/ಅನುದಾನಿತ ಕಾಲೇಜುಗಳಿಗೆ ನೇರ ಪ್ರವೇಶ ಪಡೆಯುವ ವಿದ್ಯಾರ್ಥಿಗಳು ಮೈಸೂರು ಜಿಲ್ಲಾ ವ್ಯವಸ್ಥಾಪಕರ ಕಛೇರಿಯಿಂದ ದಿನಾಂಕ: 25.07.2018ರೊಳಗೆ ಅರ್ಜಿಯನ್ನು ಪಡೆದು ಭರ್ತಿ ಮಾಡಿದ ಅರ್ಜಿಯನ್ನು ದಿನಾಂಕ: 04.08.2018 ರೊಳಗಾಗಿ ಮೈಸೂರು ಜಿಲ್ಲೆಯ ವ್ಯವಸ್ಥಾಪಕರಿಗೆ
ಸಲ್ಲಿಸುವುದು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 0821-2341194 ನ್ನು ಸಂಪರ್ಕಿಸಬಹುದು.

Leave a Reply

Your email address will not be published.