Breaking News
ದೊಡ್ಡ ಮೋರಿಯಲ್ಲಿ ಸಿಲುಕಿದ ಹಸು

ದೊಡ್ಡ ಮೋರಿಯಲ್ಲಿ ಸಿಲುಕಿದ ಹಸು

ಮೈಸೂರು: ಮೇಯಲು ಬಂದು ದೊಡ್ಡ ಮೋರಿಯಲ್ಲಿ ಸಿಲುಕಿ ನರಳುತ್ತಿದ್ದ ಹಸುವನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ರಕ್ಷಣೆ ಮಾಡಿದ್ದಾರೆ.ಮೈಸೂರಿನ ಜೆ.ಪಿ.ನಗರದ ರಿಂಗ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಮಳೆಯ ಹಿನ್ನಲೆಯಲ್ಲಿ ಮೋರಿ ತುಂಬಿ ಹೋಗಿತ್ತು. ಈ ನಡುವೆ ಇಲ್ಲಿ ಮೇಯಲು ಬಂದ ಹಸು ಮೋರಿಯೊಳಗೆ ಸಿಲುಕಿ ಮೇಲೆ ಬರಲಾಗದೇ ಒಂದು ಗಂಟೆಗೂ ಹೆಚ್ಚುಕಾಲ ನರಳಾಡಿದೆ.ಈ ಬಗ್ಗೆ ಸ್ಥಳೀಯರು ಅಗ್ನಿಶಾಮಕ ದಳದ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಆಗಮಿಸಿದ ಮೈಸೂರಿನ ಸರಸ್ವತಿಪುರಂ ಅಗ್ನಿ ಶಾಮಕ ಸಿಬ್ಬಂದಿಗಳು ಅರ್ಧ ಗಂಟೆಗೂ ಹೆಚ್ಚು ಕಾಲ ಕಾರ್ಯಚರಣೆ ನಡೆಸಿ ಹಸುವನ್ನ ರಕ್ಷಣೆ ಮಾಡಿದ್ದಾರೆ. ಹಗ್ಗದ ಸಹಾಯ ಬಳಸಿ ಹಸುವನ್ನ ಮೇಲಕ್ಕೆತ್ತಿದ್ದಾರೆ.

Leave a Reply

Your email address will not be published.