Breaking News
ವಿದ್ಯಾರ್ಥಿ ನಿಲಯ : ಅರ್ಜಿ ಆಹ್ವಾನ

ವಿದ್ಯಾರ್ಥಿ ನಿಲಯ : ಅರ್ಜಿ ಆಹ್ವಾನ

ಮೈಸೂರು: ಹೆಚ್.ಡಿ.ಕೋಟೆ ಟೌನ್‍ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ / ಅರೆ ಸರ್ಕಾರಿ ಪದವಿ ಪೂರ್ವ / ಪದವಿ / ಐಟಿಐ ಮತ್ತು ಡಿಇಡಿ ಕಾಲೇಜುಗಳಲ್ಲಿ ವಿವಿಧ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ / ವಿದ್ಯಾಥಿನಿಯರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಡಿ.ದೇವರಾಜಅರಸು ಮೆಟ್ರಿಕ್ ನಂತರ ಬಾಲಕರ (ಹೆಚ್‍ಐಸಿ ಬಿಸಿಡಬ್ಲ್ಯುಡಿ-923) ಮತ್ತು ಬಾಲಕಿಯರ ವಿದ್ಯಾರ್ಥಿನಿಲಯ, ಹೆಚ್.ಡಿ.ಕೋಟೆ ಟೌನ್ (ಹೆಚ್‍ಐಸಿ ಬಿಸಿಡಬ್ಲ್ಯುಡಿ-2237)ಇಲ್ಲಿಗೆ ಹೊಸದಾಗಿ ಪ್ರವೇಶ ಬಯಸುವ ಪ್ರವರ್ಗ-1, 2ಎ, 2ಬಿ, 3ಎ, 3ಬಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಾಂಗಗಳಿಗೆ ಸೇರಿದ ವಿದ್ಯಾರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
ವಾರ್ಷಿಕ ಆದಾಯ ಪ್ರವರ್ಗ-1, ಎಸ್.ಸಿ ಮತ್ತು ಎಸ್.ಟಿ ರೂ.2.50 ಲಕ್ಷ ಹಾಗೂ ಪ್ರವರ್ಗ-2ಎ, 2ಬಿ, 3ಎ, 3ಬಿ ಇತರೆ ಹಿಂದುಳಿದ ವರ್ಗ ಹಾಗೂ ಇತರೆ ರೂ.1.00 ಲಕ್ಷದೊಳಗಿರಬೇಕು. www.backwardclasses.kar.nic.in ಅಥವಾ http://karepass.cgg.gov.in ಸಂಪರ್ಕಿಸಿ ಅರ್ಜಿಯನ್ನು ಸಲ್ಲಿಸಬೇಕು. ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲುಕೊನೆಯ ದಿನಾಂಕ: 20-07-2018 ವಿದ್ಯಾರ್ಥಿನಿಲಯದ ಪ್ರವೇಶಕ್ಕೆ ಇರಬೇಕಾದ ಅರ್ಹತೆ, ಸಲ್ಲಿಸಬೇಕಾದ ದಾಖಲೆಗಳ ವಿವರ ಮತ್ತು ಸರ್ಕಾರದ ಆದೇಶಕ್ಕಾಗಿ ಇಲಾಖೆಯ ವೆಬ್‍ಸೈಟ್ www.backwardclasses.kar.nic.in ನ್ನು ನೋಡಬಹುದು. ತಾಂತ್ರಿಕ ತೊಂದರೆಗಳಾದಲ್ಲಿ bcwhosteladmission@gmail.com ಇಮೇಲ್ ಮುಖಾಂತರ ದಾಖಲೆಗಳೊಂದಿಗೆ ಸಂಪರ್ಕಿಸುವುದು.ಹೆಚ್ಚಿನ ಮಾಹಿತಿಗೆ ನಿಲಯ ಮೇಲ್ವಿಚಾರಕರ ಮೊಬೈಲ್ ಸಂಖ್ಯೆ 9742249826, 8152041645 ನ್ನು ಸಂಪರ್ಕಿಸಬಹುದು.

Leave a Reply

Your email address will not be published.