Breaking News
ಜುಲೈ 25 ರಂದು ಉದ್ಯೋಗ ಮೇಳ

ಜುಲೈ 25 ರಂದು ಉದ್ಯೋಗ ಮೇಳ

ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಕಚೇರಿಯ ಆವರಣ, ಎನ್.ಆರ್.ಮೊಹಲ್ಲಾ ಮೈಸೂರು-07, ಇಲ್ಲಿ ದಿನಾಂಕ: 25-07-2018 ರಂದು ಬೆಳಿಗ್ಗೆ:10-00 ಘಂಟೆಗೆ ಕಚೇರಿಯ ಆವರಣದಲ್ಲಿ ವಿಶ್ವ ಕೌಶಲ್ಯ ದಿನದ ಅಂಗವಾಗಿ “ಉದ್ಯೋಗ ಮೇಳ ”ವನ್ನು ಆಯೋಜಿಸಲಾಗಿದೆ.
ಉದ್ಯೋಗ ಮೇಳದಲ್ಲಿ ಸುರಭಿ ಪ್ಲಾನ್‍ಟೆಕ್ ಮೈಸೂರು, ಬಿ.ಎಸ್.ಗೌಡ ಎಂಟರ್ ಪ್ರೈಸಸ್ ಮೈಸೂರು, ಯುರೇಕಾಫೋಬ್ರ್ಸ್ ಮೈಸೂರು, ತೇಜಸ್ವಿನಿ ಎಂಟರ್‍ಪ್ರೈಸಸ್ ಮೈಸೂರು, ರೀಟೇಲ್ ವಕ್ರ್ಸ್‍ಇಂಡಿಯಾ ಪ್ರೈ. ಲಿ. ಬೆಂಗಳೂರು, ಹಿಂದುಜಾ ಗ್ಲೋಬಲ್ ಸಲ್ಯೂಷನ್ ಮೈಸೂರು, ರಾಜಾ ಬಯೋಟೆಕ್ ಮೈಸೂರು, ಗ್ರಾಸ್ ರೋಟ್ ಮೈಸೂರು, ಉಡ್ ಲ್ಯಾಂಡ್ ಮೈಸೂರು, ರಾಣೆ ಮದ್ರಾಸ್ ಪ್ರೈ. ಲಿ ಮೈಸೂರು. ಹಾಗೂ ಹಾಗೂ ಇನ್ನೀತರೆ ಖಾಸಗಿ ನಿಯೋಜಕರುಗಳು ಭಾಗವಹಿಸಲಿದ್ದಾರೆ.
ವಿದ್ಯಾರ್ಹತೆ ಎಸ್‍ಎಸ್‍ಎಲ್‍ಸಿ ಉತ್ತೀರ್ಣ ಅಥವಾ ಅನುತ್ತೀರ್ಣ, ಪಿಯುಸಿ, ಜೆಓಸಿ, ಐಟಿಐ, ಡಿಪ್ಲೋಮಾ, ಯಾವುದೇ ಪದವಿಗಳಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳಿಗೆ ಸ್ಥಳದಲ್ಲಿಯೇ ನೇಮಕಾತಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಅರ್ಹ ನಿರುದ್ಯೋಗ ಪುರುಷ/ಮಹಿಳಾ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ಉದ್ಯೋಗ ಮೇಳದಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಕೋರಲಾಗಿದೆ. ಉದ್ಯೋಗ ಮೇಳದಲ್ಲಿ ಭಾಗವಹಿಸುವ ಅಭ್ಯರ್ಥಿಗಳು ತಮ್ಮ ಸ್ವಂತ-ಪರಿಚಯ ಪತ್ರ (ಃIಔ-ಆಂಖಿಂ) ದೊಂದಿಗೆ ಹಾಜರಾಗುವುದು.
ಹೆಚ್ಚಿನ ಮಾಹಿತಿಗೆ ಡಿ.ಎಂ.ರಾಣಿ ಸಹಾಯಕ ನಿರ್ದೇಶಕರು, ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಮೈಸೂರು-07 ಇವರನ್ನು ಕಛೇರಿ ವೇಳೆಯಲ್ಲಿ ಅಥವಾ ದೂರವಾಣಿ ಸಂಖ್ಯೆ:0821-2489972 ನ್ನು ಸಂಪರ್ಕಿಸಬಹುದು.

Leave a Reply

Your email address will not be published.