Breaking News
ಸಾಲಸೌಲಭ್ಯ ಅರ್ಜಿ ಆಹ್ವಾನ

ಸಾಲಸೌಲಭ್ಯ ಅರ್ಜಿ ಆಹ್ವಾನ

ಮೈಸೂರು: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃಧ್ಧಿ ನಿಗಮವು 2018-19ನೇ ಸಾಲಿನಲ್ಲಿ ಸ್ವಯಂ ಉದ್ಯೋಗ ಯೋಜನೆ, ಶ್ರಮಶಕ್ತಿ ಸಾಲ ಯೋಜನೆ, ಮೈಕ್ರೋಸಾಲ ಯೋಜನೆ,ಅರಿವು ಸಾಲ ಯೋಜನೆ, (ವಿದಾಭ್ಯಾಸಕ್ಕಾಗಿ) ಗಂಗಾ ಕಲ್ಯಾಣ ಯೋಜನೆ, ಪಶುಸಂಗೋಪನೆ ಯೋಜನೆ, ಅಲ್ಪಸಂಖ್ಯಾತರ ರೈತರ ಕಲ್ಯಾಣ ಯೋಜನೆ (ಕೃಷಿ ಯಂತ್ರೋಪಕರಣ ಕೊಳ್ಳಲು), ಆಟೋ ಮೊಬೈಲ್ ಸರ್ವೀಸ್, ರೇಷ್ಮೆ ಚಟುವಟಿಕೆಗಳಿಗೆ ತರಬೇತಿ ಮತ್ತು ಸಾಲ ಯೋಜನೆ, ಟ್ಯಾಕ್ಸಿ/ಗೂಡ್ಸ್ ವಾಹನ ಖರೀದಿಗಾಗಿ ಸಹಾಯಧನ, ಕೃಷಿ ಭೂಮಿ ಖರೀದಿ ಯೋಜನೆ, ಕೊಲ್ಲಿ ರಾಷ್ಟ್ರಗಳಲ್ಲಿ ಕೆಲಸ ಮಾಡಿ ಹಿಂತಿರುಗಿರುವ ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ ಸಾಲ ಯೋಜನೆ, ಮನೆ ಮಳಿಗೆ ಯೋಜನೆ, ಗೃಹ ನಿವೇಶನ ಖರೀದಿ ಮತ್ತು ಮನೆ ನಿರ್ಮಾಣಕ್ಕೆ ಪಡೆದ ಸಾಲದ ಮೇಲಿನ ಬಡ್ಡಿ ಸಹಾಯಧನ ಯೋಜನೆ (ಕ್ರಿಶ್ಚಿಯನ್ ಸಮುದಾಯದವರಿಗೆ ಮಾತ್ರ) ಗಳಿಗೆ ಸಾಲಸೌಲಭ್ಯ ಪಡೆಯಲು ಅರ್ಜಿ ಆಹ್ವಾನಿಸಿದೆ.
ಅರ್ಜಿದಾರರು ಕರ್ನಾಟಕ ರಾಜ್ಯದಲ್ಲಿ ಕನಿಷ್ಠ 10 ವರ್ಷ ವಾಸವಾಗಿರಬೇಕು. ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ಗ್ರಾಮಾಂತರ ಪ್ರದೇಶದವರಿಗೆ ರೂ.81,000/-, ಮತ್ತು ನಗರ ಪ್ರದೇಶದವರಿಗೆ ರೂ.1,03,000/- ಮೀರಬಾರದು. (ಅರಿವು ಯೋಜನೆಗೆ ಹೊರತುಪಡಿಸಿ).
ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲಾತಿಗಳೊಂದಿಗೆ ವೆಬ್‍ಸೈಟ್ kmdc.kar.nic.in/arivu2 kmdc.kar.nic.in/loan/login.aspx ನಲ್ಲಿ ಸಲ್ಲಿಸಲು ಕೊನೆಯ ದಿನಾಂಕ:31-08-2018 ಕೊನೆಯ ದಿನಾಂಕವಾಗಿದೆ.
ಹೆಚ್ಚಿನ ಮಾಹಿತಿಗೆ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃಧ್ಧಿ ನಿಗಮ (ನಿ), ಎಸ್.ಕೆ.ಬಿ. ವಿದ್ಯಾ ಸಹಾಯ ಸಂಘ (ರಿ) #446, 2ನೇ ಮಹಡಿ, ಕೆಂಪನಂಜಾಂಬ ಅಗ್ರಹಾರ, ತಾರಾ ಹೋಟೆಲ್ ಹತ್ತಿರ, ಪ್ರೊಫೇಷನಲ್ ಕೊರಿಯರ್ ಕಛೇರಿ ಎದುರು, ಕೆ.ಆರ್. ಮೊಹಲ್ಲಾ, ಮೈಸೂರು ದೂರವಾಣಿ ಸಂಖ್ಯೆ 0821-2430080 ನ್ನು ಸಂಪರ್ಕಿಸಬಹುದು.

Leave a Reply

Your email address will not be published.