Breaking News

ನಾಳೆಯಿಂದ ರಾಜ್ಯಾದ್ಯಂತ ಲಾರಿ ಮುಷ್ಕರ

ನಾಳೆಯಿಂದ ರಾಜ್ಯಾದ್ಯಂತ ಲಾರಿ ಮುಷ್ಕರ

ಬೆಂಗಳೂರು: ಟೋಲ್‌ ಶುಲ್ಕ ವ್ಯವಸ್ಥೆ ರದ್ದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಲ್‌ ಇಂಡಿಯಾ ಮೋಟಾರ್‌ ಟ್ರಾನ್‌ ಪೋರ್ಟ್‌ ಜು.20ರಂದು ಕರೆ ನೀಡಿರುವ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರ್ನಾಟಕ ರಾಜ್ಯ ಲಾರಿ ಮಾಲೀಕರು ಹಾಗೂ ಏಜೆಂಟ್ಸ್‌ ಸಂಘಗಳ ಒಕ್ಕೂಟ ಬೆಂಬಲ ವ್ಯಕ್ತಪಡಿಸಿದೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಅಧ್ಯಕ್ಷ ಜಿ.ಆರ್‌.ಷಣ್ಮುಗಪ್ಪ ಮಾತನಾಡಿ, ಜು.20ರಿಂದ ನಡೆಯಲಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ತರಕಾರಿ ಸಾಗಣೆ ಲಾರಿಗಳ ಮಾಲೀಕರು ಸೇರಿ ಎಲ್ಲ ಸರಕು ಸಾಗಣೆ ವಾಹನಗಳ ಮಾಲೀಕರು-ಚಾಲಕರು ಬೆಂಬಲ ವ್ಯಕ್ತಪಡಿಸಿದ್ದಾರೆ. ಔಷಧ ಮತ್ತು ಹಾಲು ಸಾಗಣೆ ವಾಹನಗಳನ್ನು ಹೊರತುಪಡಿಸಿ ದೇಶದಾದ್ಯಂತ 90 ಲಕ್ಷಕ್ಕೂ ಅಧಿಕ ಮತ್ತು ರಾಜ್ಯಾದ್ಯಂತ 6 ಲಕ್ಷಕ್ಕೂ ಅಧಿಕ ಲಾರಿಗಳು ರಸ್ತೆಗಿಳಿಯುವುದಿಲ್ಲ ಎಂದರು.
ಕೇಂದ್ರ ಸರ್ಕಾರವು ಟೋಲ್‌ ಮುಕ್ತ ಭಾರತವನ್ನಾಗಿ ಮಾಡಬೇಕು. ದೇಶದಲ್ಲಿ ಸರಿ ಸುಮಾರು 412 ಟೋಲ್‌ಗ‌ಳಿದ್ದು,ವಾರ್ಷಿಕವಾಗಿ 1.2 ಲಕ್ಷ ಕೋಟಿ ರೂ.ಪಾವತಿಸಬೇಕಾಗಿದೆ.ಟೋಲ್‌ ಪಾವತಿಸಲು ನಾವು ತಯಾರಿದ್ದೇವೆ. ಆದರೆ, ಹಣ ಪಾವತಿಯ ವಿಧಾನ ಬದಲಾಗಬೇಕು. ದೇಶದಲ್ಲಿ ಒಂದು ಕೋಟಿಯಷ್ಟು ವಾಣಿಜ್ಯ ವಾಹನಗಳು ಟೋಲ್‌ಗ‌ಳ ಮೂಲಕ ಸಂಚರಿಸುತ್ತವೆ.ಹೀಗಾಗಿ, ವರ್ಷಕ್ಕೆ 50 ಸಾವಿರದಷ್ಟು ಹಣವನ್ನು ವರ್ಷದ ಮೊದಲೇ ನಾವು ಪಾವತಿ ಮಾಡಲು ಸಿದಟಛಿ. ಎಲ್ಲ ಟೋಲ್‌ಗ‌ಳಲ್ಲಿ ಮುಕ್ತ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕೆಂದು ಆಗ್ರಹಿಸಿದರು.
ಟೋಲ್‌ ಪ್ಲಾಜಾಗಳಲ್ಲಿ ಪ್ರತಿ ವಾಹನ 15 ರಿಂದ 20 ನಿಮಿಷಗಳ ಕಾಲ ನಿಂತು ಹೋಗುವುದರಿಂದ ಗಾಳಿಯಲ್ಲಿ ವ್ಯರ್ಥವಾಗುವ ಡೀಸೆಲ್‌ ಹಾಗೂ ಸಮಯ, ವಾಹನದ ರಿಪೇರಿ ಮತ್ತು ಟೋಲ್‌ಗಳ ನಿರ್ವಹಣಾ ವೆಚ್ಚಗಳಿಂದ 84 ಸಾವಿರ ಕೋಟಿ ರೂ.ಗಳ ನಷ್ಟವಾಗುತ್ತಿದೆ ಎಂದು ಐಐಎಂ ಸಂಸ್ಥೆ ವರದಿ ನೀಡಿದೆ. ಇದನ್ನೆಲ್ಲಾ ಪರಿಗಣಿಸಿ ಕೇಂದ್ರ ಸರ್ಕಾರ ಟೋಲ್‌ ಮುಕ್ತ ಭಾರತ ಮಾಡಬೇಕು ಎಂದು ಆಗ್ರಹಿಸಿದರು.

Leave a Reply

Your email address will not be published.