Breaking News

ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ

ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ

ಮೈಸೂರು: ಮೈಸೂರು ನಗರ ಕೇಂದ್ರ ಗ್ರಂಥಾಲಯ ಕುವೆಂಪುನಗರ ಶಾಖಾ ಗ್ರಂಥಾಲಯ ಆವರಣದಲ್ಲಿ ದಿ: 07.08.2018 ರಂದು ಛತ್ರದ ಪುಟ್ಟಸ್ವಾಮಯ್ಯ ಸಮಾಜ ಸೇವಾ ಟ್ರಸ್ಟ್(ರಿ), ಮೈಸೂರು, ಇವರು ಹಮ್ಮಿಕೊಂಡಿದ್ದ ಸಸಿನೆಡುವ ಕಾರ್ಯಕ್ರಮವನ್ನು ನಗರ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕರಾದ ಮಂಜುನಾಥ್ ಬಿ.ಇವರು ಸಸಿ ನೆಡುವ ಮೂಲಕ ಉದ್ಘಾಟನೆಯನ್ನು ನೆರವೇರಿಸಿ, ಗಿಡ ಬೆಳೆಸಿ ನಾಡು ಉಳಿಸಿ,ಮನೆಗೊಂದು ಗಿಡ ಊರಿಗೊಂದು ವನ ಎಂಬ ಸಂದೇಶವನ್ನು ಸಾರಿ ಗ್ರಂಥಾಲಯದ ಉಪಯೋಗವನ್ನು ಬಡಾವಣೆಯ ಓದುಗರು ಉತ್ತಮವಾಗಿ ಬಳಸಿಕೊಳ್ಳಲು ತಿಳಿಸಿದರು.
ಕೇವಲ ಸ್ಥಳೀಯ ಸಂಸ್ಥೆಗಳು ಪಾವತಿಸುವ ಗ್ರಂಥಾಲಯ ಕರದಲ್ಲಿ ಮಾತ್ರ ಗ್ರಂಥಾಲಯವು ಬೆಳೆಯುತ್ತಿದ್ದು, ಮೈಸೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕುವೆಂಪುನಗರ ಶಾಖಾ ಗ್ರಂಥಾಲಯದ ನೂತನ ಕಟ್ಟಡ ಹಾಗೂ ಹಳೆಯ ಕಟ್ಟಡದ ನವೀಕರಣವನ್ನು ಗ್ರಂಥಾಲಯ ಕರದ ಮೊತ್ತದಲ್ಲಿ ಇತರೆ ಖರ್ಚು-ವೆಚ್ಚಗಳಲ್ಲಿ ಮಿತವ್ಯಯ ಸಾಧಿಸಿ, ಸದರಿ ಕಾಮಗಾರಿಯನ್ನು ಮೇ|| ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ, ಮೈಸೂರು, ಇಲಾಖೆ ವತಿಯಿಂದ ಬಡಾವಣೆಯ ಜನತೆಗಾಗಿ ಕೈಗೊಂಡಿರಲಾಗಿರುತ್ತದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನ ಅಧ್ಯಕ್ಷರಾದ ಡಾ| ವೈ.ಡಿ. ರಾಜಣ್ಣ ರವರು, ಗ್ರಂಥಾಲಯವು ಜನರನ್ನು ಜ್ಞಾನದೆಡೆಗೆ ಒಯ್ಯಲು ಸಹಕಾರಿ, ಒಂದು ಊರಿನ ಅಭಿವೃದ್ಧಿಯಾಗಬೇಕಾದರೆ ಅಲ್ಲಿ ಗ್ರಂಥಾಲಯವಿರಬೇಕು ಹಾಗೂ ಗ್ರಾಮೀಣ ಗ್ರಂಥಾಲಯದ ಸ್ಥಿತಿಗತಿಯ ಬಗ್ಗೆ ವಿವರಿಸಿದರು.
ಪುಟ್ಟಸ್ವಾಮಯ್ಯ ಸಮಾಜ ಸೇವಾ ಟ್ರಸ್ಟ್‍ನ ಅಧ್ಯಕ್ಷರಾದ ಪಿ. ಪದ್ಮ, ಸಸಿ ನೆಡುವ ಜೊತೆಗೆ ಸ್ವಚ್ಛತೆಯನ್ನು ಕಾಪಾಡಬೇಕು. ಸ್ವಚ್ಛತೆಗೆ ಎಲ್ಲರೂ ಸಹಕರಿಸಬೇಕು ಎಂದು ಮನವಿಯನ್ನು ಮಾಡಿದರು.

Leave a Reply

Your email address will not be published.