Breaking News
ಮಕ್ಕಳೊಂದಿಗೆ ಮಗುವಾದ ಸಂಗೀತ ಬ್ರಹ್ಮ

ಮಕ್ಕಳೊಂದಿಗೆ ಮಗುವಾದ ಸಂಗೀತ ಬ್ರಹ್ಮ

ಮೈಸೂರು:ಮಕ್ಕಳೊಂದಿಗೆ ಮಗುವಾಗಿ ಬೆರತ ಸಂಗೀತ ಮಾಂತ್ರಿಕ, ಸಂಗೀತ ಬ್ರಹ್ಮ ಹಂಸಲೇಖ ಅವರನ್ನೇ ಬೆರಗುಗೊಳಿಸಿದ ಪುಟ್ಟಬಾಲೆ. ಇವೆಲ್ಲಾ ಕ್ಷಣಗಳು ಕಂಡು ಬಂದಿದ್ದು ಮೈಸೂರಿನ ಕುವೇಂಪುನಗರದ ಸರ್ಕಾರಿ ಶಾಲೆಯಲ್ಲಿ.
ಕುವೆಂಪುನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚುಟುಕು ಕಥೆ ಮತ್ತು ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮಗಳನ್ನ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಂಗೀತ ಬ್ರಹ್ಮ ಹಂಸಲೇಖ ಅವರು ಮಕ್ಕಳೊಂದಿಗೆ ಮಗುವಾಗಿ ಬೆರತರು ಈ ವೇಳೆ ನಿಮ್ಮ ಗೀತ ರಚನೆಗೆ ಯಾರು ಸ್ಪೂರ್ತಿ ಎಂದು ಪುಟ್ಟಬಾಲೆಯೊಬ್ಬಳು ಹಂಸಲೇಖ ಅವರನ್ನ ಪ್ರಶ್ನಿಸಿದರು. ಪುಟ್ಟಾಣಿ ಬಾಲಕಿ ಪ್ರಶ್ನೆಗೆ ನಗುಮುಗದಲ್ಲೆ ಉತ್ತರಿಸಿದ ಹಂಸಲೇಖ. ನಿನ್ನ ಮುಗುಳುನಗೆಯೇ ನನಗೆ ಸ್ಪೂರ್ತಿ ಎಂದರು.ಮೈಸೂರು ದಸರಾ ನನ್ನ ಬಾಲ್ಯವನ್ನ ನೆನಪಿಸುತ್ತದೆ. ತಂದೆಯ ಹೆಗಲೇರಿ ಮೈಸೂರಿನ ದಸರಾ ವೀಕ್ಷಿಸಿದ್ದೆ . ಮೈಸೂರಿನ ಎಲ್ಲಾ ಸ್ಥಳಗಳು ನನಗೆ ಇಷ್ಟ. ಮೈಸೂರಿನಲ್ಲಿ ನನಗೆ ಸಾಕಷ್ಟಿವೆ ಎಂದು ಮಕ್ಕಳೊಂದಿಗೆ ತಮ್ಮ ಬಾಲ್ಯದ ಗುಟ್ಟು ತೆರೆದಿಟ್ಟರು.

Leave a Reply

Your email address will not be published.