Breaking News

ಸೇವಾ ಸಿಂಧು : ಸೇವಾ ಕೇಂದ್ರ ಪ್ರಾರಂಭಿಸಲು ಹೆಸರು ನೋಂದಾಯಿಸಿಕೊಳ್ಳಿ

ಸೇವಾ ಸಿಂಧು : ಸೇವಾ ಕೇಂದ್ರ ಪ್ರಾರಂಭಿಸಲು ಹೆಸರು ನೋಂದಾಯಿಸಿಕೊಳ್ಳಿ

ಮೈಸೂರು:ಜನತೆಯ ಮನೆ ಬಾಗಿಲಲ್ಲೇ ಸರಕಾರಿ ಸೇವೆಗಳು ಸಿಗಬೇಕೆಂಬ ಸದಾಶಯದೂಂದಿಗೆ ಸರ್ಕಾರವು ರೂಪಿಸಲಾಗಿರುವ ಸೇವಾ ಸಿಂಧು ಯೋಜನೆಯಲ್ಲಿ ಒಂದೆಡೆ ಜನತೆಗೆ ಸುಲಭದಲ್ಲಿ ಸರಕಾರಿ ಸೇವೆಗಳು ದೊರಕಬೇಕು, ಮತ್ತೊಂದೆಡೆ ಗ್ರಾಮೀಣ ನಿರುದ್ಯೋಗಿ ಯುವಕ-ಯುವತಿಯರಿಗೂ ಉದ್ಯೋಗ ಸಿಗಬೇಕೆಂಬ ಉದ್ದೇಶದೊಂದಿಗೆ ಸೇವಾ ಸಿಂಧು ಯೋಜನೆ ರೂಪುಗೂಂಡಿದೆ.
ಈ ಯೋಜನೆಯಡಿ ಕಂದಾಯ, ಆಹಾರ, ಕೃಷಿ ಇಲಾಖೆ, ಸೇರಿದಂತೆ ಒಟ್ಟು 47 ಸೇವೆಗಳನ್ನು ಆಯಾ ಗ್ರಾಮದಲ್ಲೇ ಜನತೆಗೆ ಕಲ್ಪಿಸಬಹುದಾಗಿದೆ. ಇಂತಹ ಸೇವೆಯನ್ನು ನೀಡಲು ಬಯಸುವ
ಸಾರ್ವಜನಿಕರು ಜಿಲ್ಲಾಧಿಕಾರಿ ಕಛೇರಿಯ ಇ-ಆಡಳಿತ, ಜಿಲ್ಲಾ ಯೋಜನಾಧಿಕಾರಿಗಳನ್ನು ಸಂಪರ್ಕಿಸಿ ತಮ್ಮ ಹೆಸರು ನೋಂದಾಯಿಸಿಕೊಂಡರೆ, ತಮ್ಮ ಗ್ರಾಮಗಳಲ್ಲಿ ಸರಕಾರಿ ಶುಲ್ಕ ಹಾಗೂ ಸೇವಾ ಶುಲ್ಕದೂಂದಿಗೆ ಗ್ರಾಮೀಣ ಜನತೆಗೆ ಸೌಲಭ್ಯಗಳನ್ನು ತಲುಪಿಸಬಹುದಾಗಿರುತ್ತದೆ.
ಮೈಸೂರು ಜಿಲ್ಲೆಯಲ್ಲಿ ಈ ಸೇವೆಯನ್ನು ಜಾರಿಗೆ ತರಲಾಗಿದ್ದು, ಈವರೆವಿಗೆ ಒಟ್ಟು 185 ಕಂಪ್ಯೂಟರ್, ಇಂಟರನೆಟ್ ಸೌಲಭ್ಯ,ಪ್ರಿಂಟರ್ ಹೂಂದಿರುವ ಆಸಕ್ತ ವಿದ್ಯಾವಂತರು ಹೆಸರು ನೊಂದಾಯಿಸಿಕೊಂಡಿದ್ದು. ಈ ಪೈಕಿ 102 ಸಾರ್ವಜನಿಕರು ಸಕ್ರಿಯಾರಾಗಿದ್ದು,ಸೇವಾ ಸಿಂಧು ಯೋಜನೆಯಡಿ ಸಾಮಾನ್ಯ ಸೇವಾ ಕೇಂದ್ರವನ್ನು ತೆರೆದಿರುತ್ತಾರೆ.
ಈ ಕೇಂದ್ರಗಳಲ್ಲಿ ಜಾತಿ, ಆದಾಯ ಪ್ರಮಾಣ ಪತ್ರ ನೀಡುವುದು, ವೃದ್ದಾಪ್ಯ,ವಿಧವಾ ವೇತನ, ಪಡಿತರಚೀಟಿ ತಿದ್ದುಪಡಿ, ಸೇರಿದಂತೆ, ಕೃಷಿ ಇಲಾಖೆ, ಆರ್‍ಟಿಒ,ಆರೋಗ್ಯ, ಸೇರಿದಂತೆ ಒಟ್ಟು 47 ಸೇವೆಗಳನ್ನು ಒಂದೇ ಸೂರಿನಡಿ ಕಲ್ಪಿಸಿಕೊಡಲಾಗುವುದು.
ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ನೀಡಲಾಗುವ ಸೌಲಭ್ಯಗಳಿಗೆ ಸರಕಾರವೇ ಶುಲ್ಕಗಳನ್ನು ನಿಗದಿ ಪಡಿಸಿದೆ. ಕಂದಾಯ ಇಲಾಖೆ ವ್ಯಾಪ್ತಿಯ ಜಾತಿ ಪ್ರಮಾಣ ಪತ್ರ, ಆದಾಯ ದೃಢೀಕರಣ ಪತ್ರ, ಭೂ ಹಿಡುವಳಿ ಪತ್ರ, ಭೂರಹಿತ ಪ್ರಮಾಣ ಪತ್ರಗಳಿಗೆ ತಲಾ 40ರೂ. ಶುಲ್ಕ ನಿಗದಿಯಾಗಿದೆ, ಇನ್ನೂ ಆಹಾರ ಇಲಾಖೆಯ ಪಡಿತರ ಚೀಟಿಯಲ್ಲಿನ ತಿದ್ದುಪಡಿಗಳಿಗೆ 20 ರೂ ಶುಲ್ಕ ನಗದಿ ಮಾಡಲಾಗಿದೆ. ಇದೇ ರೀತಿಯಲ್ಲಿ ಉಳಿದ ಸೇವೆಗಳಿಗೂ ದರ ಪಟ್ಟಿ ನಿಗದಿ ಮಾಡಲಾಗಿದೆ.
ಗ್ರಾಮೀಣ ಭಾಗದ ವಿದ್ಯಾವಂತರು, ತಾಂತ್ರಿಕವಾಗಿ ಮುಂದಿರುವ ಆಸಕ್ತರು ಸಾಮಾನ್ಯ ಸೇವಾ ಕೇಂದ್ರವನ್ನು ಆರಂಭಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾಧಿಕಾರಿಗಳ ಕಾರ್ಯಲಯದ ಜಿಲ್ಲಾ ಯೋಜನಾ ವ್ಯವಸ್ಥಾಪಕರು ಮೊ.ನಂ: 9731167670/ 9916336536 ಯನ್ನು ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published.