Breaking News

ಮೈಸೂರು- ಮಡಿಕೇರಿ ಬಸ್ ಸಂಚಾರ ಬಂದ್

ಮೈಸೂರು- ಮಡಿಕೇರಿ  ಬಸ್ ಸಂಚಾರ ಬಂದ್

ಮೈಸೂರು: ಕೊಡಗಿನಲ್ಲಿ ಮಳೆರಾಯನ ಆರ್ಭಟದಿಂದ ಪ್ರವಾಹದ ಸ್ಥಿತಿ ನಿರ್ಮಾಣವಾಗಿದ್ದು ಗುಡ್ಡಕುಸಿತ ಸಂಪರ್ಕ ಕಡಿತದಿಂದ ಅಲ್ಲಿರುವ ಜನ ಕಂಗಾಲಾಗಿದ್ದಾರೆ. ಈ ಮಧ್ಯೆ ಕಾವೇರಿ ಸೇತುವೆಯೂ ಮುಳುಗುವ ಭೀತಿ ಇದ್ದು ಸಂಪರ್ಕವನ್ನ ಬಂದ್ ಮಾಡಲಾಗಿದೆ.ಇನ್ನು ಮಡಿಕೇರಿಯಲ್ಲಿ ಧಾರಾಕಾರ ಮಳೆಯಿಂದಾಗಿ ಮೈಸೂರು-ಮಡಿಕೇರಿ ನಡುವಿನ ಬಸ್ ಸಂಚಾರವನ್ನ ಸ್ಥಗಿತಗೊಳಿಸಲಾಗಿದೆ. ತೀವ್ರ ಮಳೆಯಿಂದಾಗಿ ಭೂಕುಸಿತ ಉಂಟಾಗಿದ್ದು ಸಂಪರ್ಕ ಬಂದ್ ಆಗಿದೆ. ಹೀಗಾಗಿ ಮೈಸೂರಿನಿಂದ ಮಡಿಕೇರಿಗೆ ಸಂಚಾರ ಸ್ಥಗಿತಗೊಳಿಸಲಾಗಿದೆ.ಪ್ರತಿನಿತ್ಯ ಮೈಸೂರಿನಿಂದ ಮಡಿಕೇರಿ ಮಾರ್ಗವಾಗಿ 120 ಬಸ್ ತೆರಳುತ್ತಿದ್ದವು. ಹಲವೆಡೆ ರಸ್ತೆ ಸಂಪರ್ಕ ಕಡಿತವಾಗಿ ಮಡಿಕೇರಿಯತ್ತ ಪ್ರಯಾಣಿಸಬೇಕಿದ್ದ ಎಲ್ಲಾ ಬಸ್ ಗಳ ಸಂಚಾರ ಸ್ಥಗಿತವಾಗಿದೆ. ಪ್ರಯಾಣಿಕರು ಬಸ್ ಗಳಿಲ್ಲದೇ ಪರದಾಡುತ್ತಿದ್ದು, ರಸ್ತೆ ಸಂಪರ್ಕ ಸರಿಯಾದ ಮೇಲೆ ಮತ್ತೆ ಸಂಚಾರ ಆರಂಭವಾಗಲಿದೆ ಎಂದು ಕೆಎಸ್ಆರ್ ಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Leave a Reply

Your email address will not be published.