Breaking News

ವರುಣನ ಆರ್ಭಟದಿಂದಾಗಿ ಕೊಡಗು- ಮೈಸೂರು ಸಂಪರ್ಕ ಕಡಿತ

ವರುಣನ ಆರ್ಭಟದಿಂದಾಗಿ  ಕೊಡಗು- ಮೈಸೂರು ಸಂಪರ್ಕ ಕಡಿತ

ಮೈಸೂರು:ನಿರಂತರ ಮಳೆಯಿಂದಾಗಿ ಕೊಡಗು ಜಿಲ್ಲೆ ತತ್ತರಿಸಿ ಹೋಗಿದ್ದು, ವರುಣನ ಆರ್ಭಟದಿಂದಾಗಿ ಇದೇ ಮೊದಲ ಬಾರಿಗೆ ಕೊಡಗು- ಮೈಸೂರು ಸಂಪರ್ಕ ಕಡಿತವಾಗಿದೆ.ಹಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ನದಿಗಳು ಉಕ್ಕಿ ಹರಿಯುತ್ತಿದ್ದು, ಕೊಡಗಿನಲ್ಲಿ ಪ್ರವಾಹದ ಸ್ಥಿತಿ ಸೃಷ್ಟಿಯಾಗಿದ್ದು, ಹಲವೆಡೆ ರಸ್ತೆ ಸಂಪರ್ಕಗಳು ಸಂಪೂರ್ಣ ಕಡಿತಗೊಂಡಿದೆ. ಕುಶಾಲನಗರ ಜಲಾವೃತ್ತ ಆಗುವ ಭೀತಿ ಎದುರಾಗಿದೆ ಪಿರಿಯಾಪಟ್ಟಣ ಗಡಿ ಹಾಗೂ ಕುಶಾಲನಗರದ ಕಾವೇರಿ ಸೇತುವೆ ಬಳಿ ಎಲ್ಲಾ ವಾಹನಗಳಿಗೆ ನಿರ್ಬಂಧ ವಿಧಿಸಲಾಗಿದೆ. ಇದೇ ಮೊದಲ ಭಾರಿಗೆ ಕೊಡಗು ಮೈಸೂರು ಸಂಪರ್ಕ ಕಡಿತವಾಗಿದೆ.ಇಂದು ಕಂದಾಯ ಸಚಿವ ಆರ್ ವಿ ದೇಶ ಪಾಂಡೆ ಕೊಡಗು ಜಿಲ್ಲೆಗೆ ಭೇಟಿ ನೀಡಿಪರಿಶೀಲನೆ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಕೊಡಗಿನಲ್ಲಿ ಭಾರಿ ಮಳೆ ಹಿನ್ನೆಲೆ. ಮಳೆಯಿಂದ ಜಲಾವೃತವಾಗಿದ್ದ ಸ್ಥಳಗಳಿಗೆ ಕೊಡಗು ಮೈಸೂರು ಸಂಸದ ಪ್ರತಾಪ್ ಸಿಂಹ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮನೆ ಕಳೆದುಕೊಂಡಿರುವ ನಿರಾಶ್ರಿತರಿಗೆ ಸೂಕ್ತ ಪರಿಹಾರ ಕೊಡಿಸುವ ಭರವಸೆಯನ್ನ ಸಂಸದ ಪ್ರತಾಪ್ ಸಿಂಹ ನೀಡಿದ್ದಾರೆ.

Leave a Reply

Your email address will not be published.