Breaking News

ಸೆ.25ರಂದು ಕಲಾಮಂದಿರದಲ್ಲಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ‘ಕೃಷ್ಣೇಗೌಡನ ಆನೆ’ ನಾಟಕ ಪ್ರದರ್ಶನ

ಸೆ.25ರಂದು ಕಲಾಮಂದಿರದಲ್ಲಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ‘ಕೃಷ್ಣೇಗೌಡನ ಆನೆ’ ನಾಟಕ ಪ್ರದರ್ಶನ

ಮೈಸೂರು:ಅಭಿನಯ ಕಲಾತಂಡ ಹಾಗೂ ಪ್ರತಿಬಿಂಬ ಕಲಾವಿದರು ಸಹಯೋಗದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ಸೆ.25ರಂದು ಕಲಾಮಂದಿರದಲ್ಲಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ‘ಕೃಷ್ಣೇಗೌಡನ ಆನೆ’ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ರಂಗ ನಿರ್ದೇಶಕ ಎಂ.ಸಿದ್ದರಾಜು ತಿಳಿಸಿದರು.

ಪಿಯು ವಿದ್ಯಾರ್ಥಿಗಳಿಗಾಗಿ ಗದ್ಯಭಾಗವಾಗಿರುವುದರಿಂದ ಅವರ ಅನುಕೂಲಕ್ಕಾಗಿ ಆ ದಿನ ಬೆಳಗ್ಗೆ 10, ಮಧ್ಯಾಹ್ನ 12, 2 ಹಾಗೂ ಸಂಜೆ 4 ಗಂಟೆಗೆ ನಾಲ್ಕು ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಎನ್.ಎಸ್ ಟಿ ಪದವೀಧರ ಕೀರ್ತಿರಾಜು ನಾಟಕ ನಿರ್ದೇಶಿಸಿದ್ದು ಅಭಿನಯ ಕಲಾತಂಡ ಹಾಗೂ ಪ್ರತಿಬಿಂಬ ಕಲಾವಿದರು ಭಾಗವಹಿಸಲಿದ್ದಾರೆ. ವಿದ್ಯಾರ್ಥಿಗಳಿಗಾಗಿ 30 ರೂ ರಿಯಾಯಿತಿ ದರವನ್ನು ನಿಗದಿ ಪಡಿಸಲಾಗಿದೆ, ವಿದ್ಯಾರ್ಥಿ ತಂಡದೊಂದಿಗೆ ಆಗಮಿಸುವ ಒಬ್ಬ ಅಧ್ಯಾಪಕರಿಗೆ ಉಚಿತ ಪ್ರವೇಶವಿರಲಿದೆ ಎಂದು ತಿಳಿಸಿದರು.

ನಾಟಕದ ನಿರ್ದೇಶಕ ಕೀರ್ತಿರಾಜು, ಪ್ರತಿಬಿಂಬ ತಂಡದ ರವಿಕುಮಾರ್ ಗೋಷ್ಠಿಯಲ್ಲಿ ಇದ್ದರು.

Leave a Reply

Your email address will not be published.