Breaking News

ಗಜ ಪಡೆಗಳಿಗೆ ಆಹಾರವನ್ನ ತಮ್ಮ ಕೈಯ್ಯಾರೇ ತಿನ್ನಿಸಿ ಸಂತಸ ವ್ಯಕ್ತ ಪಡಿಸಿರುವ ಯದುವೀರ್

ಗಜ ಪಡೆಗಳಿಗೆ  ಆಹಾರವನ್ನ ತಮ್ಮ ಕೈಯ್ಯಾರೇ ತಿನ್ನಿಸಿ ಸಂತಸ ವ್ಯಕ್ತ ಪಡಿಸಿರುವ ಯದುವೀರ್

ಮೈಸೂರು: ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಳಲು ಕಾಡಿನಿಂದ ಅರಮನೆಗೆ ಆಗಮಿಸಿರುವ ಗಜ ಪಡೆಗಳಿಗೆ ಯದುವೀರ್ ಕಬ್ಬು ಮತ್ತು ಕುಸರೆ ಆಹಾರವನ್ನ ತಮ್ಮ ಕೈಯ್ಯಾರೇ ತಿನ್ನಿಸುವ ಮೂಲಕ ಸಂತಸ ವ್ಯಕ್ತ ಪಡಿಸಿದ್ದಾರೆ.ವಿಶ್ವವಿಖ್ಯಾತ ಮೈಸೂರು ದಸರಾದ ಜಂಬೂ ಸವಾರಿಯಲ್ಲಿ ಪಾಲ್ಗೊಳಲು ಕಾಡಿನಿಂದ ಅರಮನೆಗೆ ಬಂದು ರಾಜಾತಿಥ್ಯ ಸ್ವೀಕರಿಸುತ್ತಿರುವ ದಸರಾ ಗಜ ಪಡೆಗಳು ಅರಮನೆ ಆವರಣದಲ್ಲಿ ಬೀಡು ಬಿಟ್ಟಿವೆ.
ಇನ್ನು ಗಜಪಯಣದ ಮೂಲಕ ತಂಡದಲ್ಲಿ 6 ಆನೆಗಳು ಅರಮನೆಗೆ ಪ್ರವೇಶಿಸಿದ್ದು, ಇಂದು ಆನೆಗಳಿರುವ ಸ್ಥಳಕ್ಕೆ ಯದುವೀರ್ ಭೇಟಿ ನೀಡಿ ಆನೆಗಳ ಆರೋಗ್ಯ ವಿಚಾರಿಸಿದ್ದಾರೆ. ಸ್ವತಃ ತಮ್ಮ ಕೈಯ್ಯಾರೇ ಆನೆಗಳಿಗೆ ಕಬ್ಬು ಮತ್ತು ಕುಸೆರೆಯ ಮೂಲಕ ನೀಡುವ ಆಹಾರವನ್ನ ಗಜಪಡೆಯ ಕ್ಯಾಪ್ಟನ್ ಅರ್ಜುನ ಆನೆಗೆ ತಿನ್ನಿಸಿದ್ದಾರೆ.
ಈ ಸುಂದರ ಫೋಟೋಗಳನ್ನ ಸಮಾಜಿಕ ಜಾಲಾತಾಣದಲ್ಲಿ ಹಾಕಿರುವ ಯದುವೀರ್, ನಮ್ಮ ಮೈಸೂರಿನ ಸಂಸ್ಕೃತಿ ಹಾಗು ಸಂಪ್ರದಾಯಗಳಲ್ಲಿ ಆನೆಗಳು ಪ್ರಮುಖ ಪಾತ್ರವಹಿಸುತ್ತವೆ. ದಸರಾ ಮಹೋತ್ಸವಕ್ಕೆ ಮೈಸೂರು ಅರಮನೆಗೆ ಆಗಮಿಸಿರುವ ಅರ್ಜುನ ಮತ್ತು ಇತರೆ ಗಜಪಡೆಯನ್ನು ಭೇಟಿ ಮಾಡಿ ಸಂತೋಷವಾಯಿತು ಎಂದು ಬರೆದುಕೊಳ್ಳುವ ಮೂಲಕ ಸಂತೋಷ ವ್ಯಕ್ತ ಪಡಿಸಿದ್ದಾರೆ.

Leave a Reply

Your email address will not be published.