Breaking News

ಕೆಎಸ್ ಐಸಿ ಸಿಲ್ಕ್ ಮಳಿಗೆಯಲ್ಲಿ ರಿಯಾಯತಿ ಸೀರೆಗೆ ನೂಕು ನುಗ್ಗಲು

ಕೆಎಸ್ ಐಸಿ ಸಿಲ್ಕ್ ಮಳಿಗೆಯಲ್ಲಿ ರಿಯಾಯತಿ ಸೀರೆಗೆ ನೂಕು ನುಗ್ಗಲು

ಮೈಸೂರು:ಕೆಎಸ್ ಐಸಿ ರೇಷ್ಮೆ ಸೀರೆ ಖರೀದಿಗಾಗಿ ನೂಕು ನುಗ್ಗಲು ಉಂಟಾಗಿದ್ದು, ಮಹಿಳೆಯರು ಪ್ರತಿಭಟನೆ ನಡೆಸಿದ ಘಟನೆ ಮೃಗಾಲಯದ ಎದುರಿರುವ ಕೆಎಸ್ ಐಸಿ ಸಿಲ್ಕ್ ಮಳಿಗೆಯಲ್ಲಿ ನಡೆದಿದೆ.
ಗೌರಿ ಹಬ್ಬದ ಪ್ರಯುಕ್ತ ರಿಯಾಯತಿ ದರದಲ್ಲಿ ಕೆಎಸ್ ಐಸಿ ಯ ರಾಜ್ಯದಲ್ಲಿನ 12ಬ್ರಾಂಚ್ ಗಳಲ್ಲಿ ಸೀರೆ ನೀಡಲಾಗುತ್ತಿದ್ದು, ಮೈಸೂರಿನಲ್ಲಿಯೂ ಕೆಎಸ್ ಐಸಿ ಮಳಿಗೆ ಸೀರೆ ನೀಡಲಾಗುತ್ತಿದೆ. ಮಧ್ಯಾಹ್ನ 3ಗಂಟೆಯವರೆಗೆ ಆಧಾರ್ ನೋಂದಣಿ ಮಾಡಿಸಿಕೊಂಡು ಬಳಿಕ ಲಾಟರಿಯ ಮೂಲಕ ಸೀರೆ ವಿತರಿಸಲಾಗುತ್ತಿದೆ ಎಂದು ಸಂಸ್ಥೆಯ ಮ್ಯಾನೇಜರ್ ತಿಳಿಸಿದ್ದಾರೆ. ಮಳಿಗೆಯ ಎದುರು ಭಾರೀ ಸಂಖ್ಯೆಯಲ್ಲಿ ಸೀರೆ ಖರೀದಿಗಾಗಿ ಮಹಿಳೆಯರು ಜಮಾಯಿಸಿದ್ದು, ನಾವು ಬೆಳಿಗಿನ ಜಾವದಿಂದಲೇ ಇಲ್ಲಿಗೆ ಬಂದು ಕುಳಿತಿದ್ದೇವೆ. ನೀವು ಆಧಾರ್ ಸಂಖ್ಯೆ ನೋಂದಣಿ ಮಾಡಿಕೊಂಡು ಲಾಟರಿ ಮೂಲಕ ಅಯ್ಕೆ ಮಾಡಿ ಸೀರೆ ನೀಡಿದರೆ ನಮಗೆ ಅನ್ಯಾಯವಾಗಲಿದೆ. ಬೆಳಿಗ್ಗೆಯಿಂದಲೇ ಬಂದು ಕಾದು ಕುಳಿತವರಿಗೆ ಬೆಲೆಯಿಲ್ಲವೇ ಎಂದು ಮ್ಯಾನೇಜರ್ ಅವರನ್ನೇ ತರಾಟೆಗೆ ತೆಗೆದುಕೊಂಡಿದ್ದಾರೆ. ಅಷ್ಟೇ ಅಲ್ಲದೇ ಸರ್ಕಾರದ ವಿರುದ್ಧ, ಮಳಿಗೆಯ ಮ್ಯಾನೇಜರ್ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಮುನ್ನ ಸ್ಥಳಕ್ಕಾಗಮಿಸಿದ ದೇವರಾಜ ಠಾಣೆಯ ಎಸಿಪಿ ಗಜೇಂದ್ರ ಪ್ರಸಾದ್, ನಜರ್ ಬಾದ್ ಠಾಣೆಯ ಇನ್ಸಪೆಕ್ಟರ್ ಶೇಖರ್ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದ್ದಾರೆ. ಮ್ಯಾನೇಜರ್ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.

Leave a Reply

Your email address will not be published.