Breaking News

ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಆಚರಣೆ

ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಆಚರಣೆ

ಮೈಸೂರು:ಮೈಸೂರು ಅರಣ್ಯ ವೃತ್ತ ಮೈಸೂರು ವಿಭಾಗವತಿಯಿಂದ ಅರಣ್ಯ ಭವನದ ಆವರಣದಲ್ಲಿರುವ ಅರಣ್ಯ ಹುತಾತ್ಮರ ಸ್ಮಾರಕವಿರುವ ದಿ.ವೆಂಕಟಸ್ವಾಮಿ ಉದ್ಯಾನವನದಲ್ಲಿಂದು ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯನ್ನು ಆಚರಿಸಲಾಯಿತು.

ಹುಲಿ ಮತ್ತು ಆನೆ ಯೋಜನೆ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜಗತ್ ರಾಮ್ ಅವರು ಪೆರೇಡ್ ಕಮಾಂಡರ್ ಅವರಿಂದ ವಂದನೆ ಸ್ವೀಕರಿಸಿ ಹುತಾತ್ಮರ ಸ್ಮಾರಕಕ್ಕೆ ಪುಷ್ಪಗುಚ್ಛ ಸಮರ್ಪಿಸಿ ಗೌರವ ಅರ್ಪಿಸಿದರು. ಬಳಿಕ ಮಾತನಾಡಿದ ಅವರು ಈ ವರ್ಷ ಮಾರ್ಚ್ 3ರಂದು ಅರಣ್ಯ ಸಂರಕ್ಷಣಾಧಿಕಾರಿ ಎಸ್ ಮಣಿಕಂದನ್ ಅವರು ನಾಗರ ಹೊಳೆ ರಾಷ್ಟ್ರೀಯ ಉದ್ಯಾನವನದ ಅರಣ್ಯಕ್ಕೆ ಕಾಡ್ಗಿಚ್ಚು ಸಂಭವಿಸಿದ ಸಮಯದಲ್ಲಿ ಅರಣ್ಯ ವೀಕ್ಷಣೆ ಮತ್ತು ತಡೆ ಬಗ್ಗೆ ಸ್ಥಳ ಪರಿಶೀಲನೆಯಲ್ಲಿ ತೊಡಗಿದ್ದಾಗ ಹಠಾತ್ ಕಾಡಾನೆ ದಾಲಿಗೆ ಸಿಲುಕಿ ಹುತಾತ್ಮರಾಗಿದ್ದರು. ಅವರ ಉತ್ಕೃಷ್ಟ ಸೇವೆಯನ್ನು ಪರಿಗಣಿಸಿ ಭಾರತ ಸರ್ಕಾರ ದಿ.ಎಸ್.ಮಣಿಕಂದನ್ ಅವರಿಗೆ 2018ರ ಎಲಿಫೆಂಟ್ ವಾರಿಯರ್ ಅವಾರ್ಡ್ ನ್ನು ವಿಶ್ವ ಆನೆ ದಿನಾಚರಣೆಯಂದು ನೀಡಿ ಗೌರವಿಸಿದೆ. ಸರ್ಕಾರ ಅರಣ್ಯ ಸಂರಕ್ಷಣಾಧಿಕಾರಿಗಳ ಅಭಿವೃದ್ಧಿಗೆ ಶ್ರಮಿಸುತ್ತಲೇ ಇದೆ ಎಂದರು. ತಮ್ಮ ಪ್ರಾಣದ ಹಂಗು ತೊರೆದು ಅರಣ್ಯ ರಕ್ಷಣೆಗೆ ಮುಂದಾಗುವ ಹುತಾತ್ಮರ ಕುಟುಂಬಕ್ಕೆ ನೆರವಾಗಲು ಅರಣ್ಯ ಹುತಾತ್ಮ ದಿನಾಚರಣೆಯ ಸಮಿತಿಯನ್ನು ಸ್ಥಾಪಿಸಿದ್ದು, ಸಮಿತಿಗೆ ನಿಧಿಯನ್ನು ವಿವಿಧ ಅರಣ್ಯ ವೃತ್ತಗಳಿಂದ ಮತ್ತು ವೈಯುಕ್ತಿಕ ದೇಣಿಗೆಗಳು ಸ್ವೀಕೃತವಾಗಿದ್ದು, ಸಂಗ್ರಹವಾಗಿರುವ ನಿಧಿಯನ್ನು ಹುತಾತ್ಮರ ಅವಲಂಬಿತರ ಏಳ್ಗೆಗಾಗಿ ಬಳಸಲಾಗುವುದು. ಹುತಾತ್ಮರ ಮಕ್ಕಳ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿ ವೇತನ ಇತ್ಯಾದಿ ಸಹಾಯಧನವನ್ನು ಮಾಡಲಾಗುವುದು ಎಂದು ತಿಳಿಸಿದರು.

ಇದೇ ವೇಳೆ ಹುತಾತ್ಮರಾದವರ ಹೆಸರುಗಳನ್ನು ಸ್ಮರಿಸಲಾಯಿತು. ವಾಲಿ ಫೈರಿಂಗ್ ನಡೆಸಲಾಯಿತು.ಈ ಸಂದರ್ಭ ಮೈಸೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎಸ್.ವೆಂಕಟೇಶನ್, ಉಪಅರಣ್ಯ ಸಂರಕ್ಷಣಾಧಿಕಾರಿಗಳಾದ ಡಾ.ಕೆ.ಟಿ.ಹನುಮಂತಪ್ಪ, ಎಂ.ಸಿ.ಸಿ ಸಿದ್ರಾಮಪ್ಪ,ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲರ್ಣಿ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಬಾನುಪ್ರಕಾಶ್, ಶ್ರೀಧರ್, ಎ.ಟಿ.ಪೂವಯ್ಯ ಮತ್ತಿತರರು ಉಪಸ್ಥಿತರಿದ್ದರು

Leave a Reply

Your email address will not be published.