Breaking News

ಮೈಸೂರು ವಿಶ್ವವಿದ್ಯಾನಿಲಯ ಕುಲಪತಿ ಹುದ್ದೆ ಪ್ರೊ.ಕೆ.ಎಸ್.ರಂಗಪ್ಪ ಅವರು ನಿವೃತ್ತಿಯಾದಂದಿನಿಂದಲೂ ಖಾಲಿ

ಮೈಸೂರು ವಿಶ್ವವಿದ್ಯಾನಿಲಯ ಕುಲಪತಿ ಹುದ್ದೆ ಪ್ರೊ.ಕೆ.ಎಸ್.ರಂಗಪ್ಪ ಅವರು ನಿವೃತ್ತಿಯಾದಂದಿನಿಂದಲೂ  ಖಾಲಿ

ಮೈಸೂರು:ಮೈಸೂರು ವಿಶ್ವವಿದ್ಯಾನಿಲಯಕ್ಕೆ ಮತ್ತೆ ಪ್ರಭಾರ ಕುಲಪತಿಗಳ ನೇಮಕ ಮತ್ತೆ ಮುಂದುವರಿದಿದೆ. ಮೈಸೂರು ವಿಶ್ವವಿದ್ಯಾನಿಲಯದ ಆರನೇ ಪ್ರಭಾರ ಕುಲಪತಿಯಾಗಿ ಪ್ರೊ.ಆಯಿಷಾ ಎಂ.ಷರೀಫ್ ಅಧಿಕಾರ ಸ್ವೀಕರಿಸಿದರು.

2017ರ ಜ.10ರಂದು ಪ್ರೊ.ಕೆ.ಎಸ್.ರಂಗಪ್ಪ ಅವರು ನಿವೃತ್ತಿಯಾದಂದಿನಿಂದಲೂ ಕುಲಪತಿ ಹುದ್ದೆ ಖಾಲಿ ಇದ್ದು, ವಿಜ್ಞಾನ ನಿಕಾಯದ ಡೀನ್ ಪ್ರೊ.ಕೆ.ಟಿ.ಉಮೇಶ್ ಅವರ ಡೀನ್ ಅವಧಿ ಸೆ.21ರಂದು ಮುಗಿದಿದ್ದು, ಅದರೊಂದಿಗೆ ಪ್ರಭಾರ ಕುಲಪತಿ ಅವಧಿಯೂ ಮುಗಿದಿದೆ. ವಾಣಿಜ್ಯ ನಿಕಾಯ ಡೀನ್ ಆಗಿರುವ ಪ್ರೊ. ಆಯಿಷಾ ಅವರು ಬಹದ್ದೂರ್ ಇನ್ಸಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ನಲ್ಲಿ ಪ್ರಾಧ್ಯಾಪಕಿಯಾಗಿದ್ದಾರೆ. ಇವರೀಗ ಆರನೇ ಪ್ರಭಾರ ಕುಲಪತಿಯಾಗಿದ್ದು, ಇವರಿಗೂ ಮುನ್ನ ಐದು ಮಂದಿ ಈಗಾಗಲೇ ಪ್ರಭಾರ ಕುಲಪತಿಗಳಾಗಿ ಕಾರ್ಯನಿರ್ವಹಿಸಿದ್ದಾರೆ.

ಪ್ರೊ. ಆಯಿಷಾ ಎಂ ಶರೀಫ್ ಮೈಸೂರು ವಿವಿ ಮೊದಲ ಅಲ್ಪ ಸಂಖ್ಯಾತ ಪ್ರಭಾರ ಕುಲಪತಿಯಾಗಿದ್ದಾರೆ. ಪ್ರೊ.ಕೆ.ಟಿ.ಉಮೇಶ್ ಅಧಿಕಾರವನ್ನು ಹಸ್ತಾಂತರಿಸಿದರು. ಹೂಗುಚ್ಛ ನೀಡುವ ಮೂಲಕ ಬರಮಾಡಿಕೊಂಡರು. ಈ ಸಂದರ್ಭ ಪರೀಕ್ಷಾಂಗ ಕುಲಸಚಿವ ಪ್ರೊ.ಜೆ.ಸೋಮಶೇಖರ್ ಮತ್ತಿತರರಿದ್ದರು. ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ಪ್ರೊ.ಆಯಿಷಾ, ಮೈಸೂರು ವಿವಿ ಕುಲಪತಿ ಆಗುತ್ತೇನೆ ಎಂದು ನಾನು ಭಾವಿಸಿರಲಿಲ್ಲ. ಹುದ್ದೆಯ ಹಿರಿತನದಲ್ಲಿ ಹಂಗಾಮಿ ಕುಲಪತಿಯಾಗಿ ಆಯ್ಕೆಯಾಗಿದ್ದು ಖುಷಿ ತಂದಿದೆ. ಮೊದಲ ಅಲ್ಪಸಂಖ್ಯಾತ ಮಹಿಳಾ ಹಂಗಾಮಿ ಕುಲಪತಿ ಅನ್ನೋದು ಒಂದು ಬದಲಾವಣೆ. ಮುಂದಿನ ದಿನಗಳಲ್ಲಿ ಮೈಸೂರು ವಿವಿ ಘನತೆ ಹೆಚ್ಚಿಸುವ ಕೆಲಸ ಮಾಡುತ್ತೇನೆ.ಅಕ್ರಮ ನೇಮಕಾತಿ ವಿಚಾರದಲ್ಲಿ ಗೊಂದಲ ಇತ್ತು.ಎಲ್ಲಾ ಕಡೆಗಳಲ್ಲೂ ಸಮಸ್ಯೆ ಇರುತ್ತವೆ. ನನ್ನ ಅವಧಿಯಲ್ಲಿ ಎಲ್ಲವೂ ಸರಿಯಾಗುವ ಭರವಸೆ ಇದೆ ಎಂದರು.

ಈ ತಿಂಗಳ ಅಂತ್ಯದೊಳಗೆ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಕುಲಪತಿಗಳನ್ನು ನೇಮಕ ಮಾಡುವುದಾಗಿ ಉನ್ನತ ಶಿಕ್ಷಣ ಸಚಿವರು ತಿಳಿಸಿದ್ದು, ಮುಹೂರ್ತ ಯಾವಾಗ ಕೂಡಿ ಬರಲಿದೆ ಎಂಬುದನ್ನು ಕಾದು ನೋಡಬೇಕಿದೆ

Leave a Reply

Your email address will not be published.