Breaking News

ವಿದ್ಯಾರ್ಥಿವೇತನ : ಅರ್ಜಿ ಆಹ್ವಾನ

ವಿದ್ಯಾರ್ಥಿವೇತನ : ಅರ್ಜಿ ಆಹ್ವಾನ

ಮೈಸೂರು:ಮೈಸೂರು ತಾಲ್ಲೂಕು ವ್ಯಾಪ್ತಿಯ ವಿವಿಧ ವಿದ್ಯಾಸಂಸ್ಥೆಗಳಲ್ಲಿ ವಿವಿಧ ಕೋರ್ಸ್‍ಗಳಲ್ಲಿ 2ನೇ ವರ್ಷ, 3ನೇ ವರ್ಷ, 4ನೇ ವರ್ಷ ಮತ್ತು ಅಂತಿಮ ವರ್ಷಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪೋಷಕರ ವಾರ್ಷಿಕ ವರಮಾನ 2.50 ಲಕ್ಷದೊಳಗಿರುವ ಅರ್ಹ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳು ಮಾತ್ರ ಸಮಾಜ ಕಲ್ಯಾಣ ಇಲಾಖಾ ವೆಬ್‍ಸೈಟ್ sw.kar.nic.in ನಲ್ಲಿ SC Post Metric Scholarshhip
(Renewal) ) ನಲ್ಲಿ ವಿದ್ಯಾರ್ಥಿವೇನ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದ್ದು, ಅರ್ಹ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ.
ವಿದ್ಯಾಸಂಸ್ಥೆಗಳ ಪ್ರಾಂಶುಪಾಲರುಗಳು /ಡೀನ್ /ನಿರ್ದೇಶಕರು/ಆಡಳಿತಾಧಿಕಾರಿಗಳು ನಿಗಧಿತ ಅರ್ಜಿ ನಮೂನೆಯನ್ನು ದೃಢೀಕೃತ ದಾಖಲಾತಿ ಪ್ರತಿಗಳೊಂದಿಗೆ ದಿನಾಂಕ 15-10-2018 ರೊಳಗೆ ವಿದ್ಯಾರ್ಥಿವೇತನ ಮಂಜೂರಾತಿಗಾಗಿ ಸಲ್ಲಿಸುವುದು.
ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರು ಗ್ರೇಡ್ 1 ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಶ್ರೀ ಮುರುಗಾದೇವಿ ದೇವಸ್ಥಾನದ ಎದುರು, ಸರ್ಕಾರಿ ಸಾರ್ವಜನಿಕ ಬಾಲಕರ ವಿದ್ಯಾರ್ಥಿನಿಲಯದ ಆವರಣ, ನಜರ್‍ಬಾದ್, ಮೈಸೂರು-10 ದೂರವಾಣಿ ಸಂಖ್ಯೆ-2520910 ನ್ನು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ಸಂಪರ್ಕಿಸುವಂತೆ ಕೋರಿದೆ.

Leave a Reply

Your email address will not be published.