Breaking News

ರೈತರಿಗೆ ಬೆಳೆ ಬೆಳೆಯುವುದರ ಬಗ್ಗೆ ಸರಿಯಾಗಿ ತರಬೇತಿ‌ ನೀಡಿ

ರೈತರಿಗೆ ಬೆಳೆ ಬೆಳೆಯುವುದರ ಬಗ್ಗೆ ಸರಿಯಾಗಿ ತರಬೇತಿ‌ ನೀಡಿ

ಮೈಸೂರು:ಅಧಿಕಾರಿಗಳು ಸ್ಥಳಕ್ಕೆ ತೆರಳಿ ಸರಿಯಾಗಿ ವರದಿ ಮಾಡಿ. ರೈತರಿಗೆ ಬೆಳೆ ಬೆಳೆಯುವುದರ ಬಗ್ಗೆ ಸರಿಯಾಗಿ ತರಬೇತಿ‌ ನೀಡಿ ಎಂದು ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಹಾಗೂ ಜಿಪಂ ಸದಸ್ಯ ವೆಂಕಟಸ್ವಾಮಿ ಕೃಷಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿಯಿ ಅಧ್ಯಕ್ಷೆ ನಯಿಮಾ ಸುಲ್ತಾನ್ ನಜೀರ್ ಅಹಮದ್ ಅವರ ನೇತೃತ್ವದಲ್ಲಿ ಜಿಪಂ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿದ ವೆಂಕಟಸ್ವಾಮಿ, ಕೋಟೆಯ ಕಾಡಂಚಿನ ಪ್ರದೇಶದಲ್ಲಿ ಅತಿಯಾದ ಮಳೆಯಾಗಿದೆ. ಹೀಗಾಗಿ ರೈತರಿಗೆ ಸರಿಯಾಗಿ ಬೆಳೆ ಕೈ ಸೇರಿಲ್ಲ. ಇದರಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅಧಿಕಾರಿಗಳಾದ ನೀವು ರೈತರಿಗೆ ಬೆಳೆ ಬೆಳೆಯುವುದರ ಬಗ್ಗೆ ಸರಿಯಾಗಿ ತರಬೇತಿ ನೀಡಿ. ನೀವೇ ರೈತರ ಮನೆಗಳಿಗೆ ತೆರಳಿ ಅರಿವು ಮೂಡಿಸಿ. ವ್ಯವಸಾಯದ ಸಲಕರಣೆಗಳನ್ನು ನೇರವಾಗಿ ರೈತರಿಗೆ ತಲುಪಿಸಬೇಕು ಎಂದರು.

ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗಿಯಾಗಿದ್ದು, ಒಂದೊಂದು ಇಲಾಖೆಗಳ ಕುಂದುಕೊರತೆಗಳನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಲಿಸಿದರು.

Leave a Reply

Your email address will not be published.