Breaking News

ಹಿಳಾ‌ ವೈದ್ಯೆಗೆ ಶಾಸಕ ಮಹದೇವ್ ಅವರಿಂದ ಧಮ್ಕಿ

ಹಿಳಾ‌ ವೈದ್ಯೆಗೆ ಶಾಸಕ ಮಹದೇವ್ ಅವರಿಂದ ಧಮ್ಕಿ

ಮೈಸೂರು:ಮಹಿಳಾ‌ ವೈದ್ಯೆಯೋರ್ವರಿಗೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ಶಾಸಕ ಮಹದೇವ್ ಅವರು ಧಮ್ಕಿ ಹಾಕಿದ ಘಟನೆ ನಡೆದಿದೆ.

ಚಿಕಿತ್ಸೆ ನೀಡಲು ಮನೆಗೆ ಬಂದಿಲ್ಲ ಎಂಬ ಕಾರಣಕ್ಕೆ ವೈದ್ಯೆ ಮೇಲೆ ಶಾಸಕ ಮಹದೇವ್ ದೂರು ನೀಡಿದ್ದಾರೆ. ಸೆಪ್ಟೆಂಬರ್ 18ರಂದು ರಾತ್ರಿ ತುರ್ತು ಚಿಕಿತ್ಸಾ ವಿಭಾಗದಲ್ಲಿ ಡಾ. ವೀಣಾಸಿಂಗ್ ಕರ್ತವ್ಯ ನಿರ್ವಹಿಸುತ್ತಿದ್ದರು. ರಾತ್ರಿ 9 ಗಂಟೆಯ ವೇಳೆಗೆ ಶಾಸಕರಿಗೆ ಅನಾರೋಗ್ಯವುಂಟಾಗಿತ್ತು. ಮನೆಗೆ ಬಂದು ಚಿಕಿತ್ಸೆ ನೀಡುವಂತೆ ಆಟೋ ಚಾಲಕನಿಂದ ಸಂದೇಶ ಕಳುಹಿಸಿದ್ದರು. ಹೆರಿಗೆ ಡಾಕ್ಟರ್ ಆಗಿರುವ ವೀಣಾಸಿಂಗ್ ತುರ್ತು ಸ್ಥಿತಿಯಲ್ಲಿದ್ದ ರೋಗಿಗಳಿಗೆ ಚಿಕಿತ್ಸೆ ನೀಡಬೇಕಿದ್ದರಿಂದ ಆರ್.ಎಂ.ಓ ಅವರಿಗೆ ಮಾಹಿತಿ ರವಾನಿಸಿದ್ದಾರೆ. ಬೇರೆ ವ್ಯವಸ್ಥೆ ಮಾಡುವುದರೊಳಗೆ ಚಿಕಿತ್ಸೆ ನಿರಾಕರಿಸಿದ ಶಾಸಕ ಮಹದೇವ್ ಅವರು ಮರುದಿನ ಬೆಂಬಲಿಗರ ಜೊತೆ ಆಸ್ಪತ್ರೆಗೆ ಆಗಮಿಸಿ ವೈದ್ಯೆ ವಿರುದ್ಧ ಕೂಗಾಡಿದ್ದಾರೆ. ಅಷ್ಟೇ ಅಲ್ಲದೆ ಆರೋಗ್ಯ ಇಲಾಖೆಗೆ ದೂರು ನೀಡಿ ನೋಟಿಸ್ ಕೊಡಿಸಿದ್ದಾರೆ ಎನ್ನಲಾಗಿದೆ

Leave a Reply

Your email address will not be published.