Breaking News

ಶುಶ್ರೂಷಾ ಸ್ಕೂಲ್ ಆಫ್ ನರ್ಸಿಂಗ್ ವತಿಯಿಂದ ಸ್ವಚ್ಛತಾ ಸೇವಾ ಅಭಿಯಾನ

ಶುಶ್ರೂಷಾ ಸ್ಕೂಲ್ ಆಫ್ ನರ್ಸಿಂಗ್ ವತಿಯಿಂದ ಸ್ವಚ್ಛತಾ ಸೇವಾ ಅಭಿಯಾನ

ಮೈಸೂರು:ಸ್ವಚ್ಛತೆಯೆಡೆಗೆ ನಮ್ಮ ನಡಿಗೆ ಎಂಬ ಘೋಷವಾಕ್ಯದೊಂದಿಗೆ ಜೆಎಸ್ಎಸ್ ಮಹಾ ವಿದ್ಯಾಪೀಠ,ಜೆಎಸ್ ಎಸ್ ಶುಶ್ರೂಷಾ ಸ್ಕೂಲ್ ಆಫ್ ನರ್ಸಿಂಗ್ ವತಿಯಿಂದ ಸ್ವಚ್ಛತಾ ಸೇವಾ ಅಭಿಯಾನವನ್ನಿಂದು ಹಮ್ಮಿಕೊಳ್ಳಲಾಗಿತ್ತು.

ಚಾಮುಂಡಿ ಬೆಟ್ಟದ ಪಾದದಿಂದ ಬೆಟ್ಟದ ತುದಿಯವರೆಗೆ ಆಯೋಜಿಸಿದ್ದ ಸ್ವಚ್ಛತಾ ಕಾರ್ಯಕ್ಕೆ ನಗರ ಪಾಲಿಕೆ ಆಯುಕ್ತ ಜಗದೀಶ್ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಜೆಎಸ್ ಎಸ್ ಶುಶ್ರೂಷಾ ಸ್ಕೂಲ್ ಆಫ್ ನರ್ಸಿಂಗ್ ವಿದ್ಯಾರ್ಥಿಗಳಿಂದ ಸ್ವಚ್ಛತಾ ಸೇವಾ ಅಭಿಯಾನವನ್ನು ಏರ್ಪಡಿಸಲಾಗಿದೆ. ಈ ವಿದ್ಯಾರ್ಥಿಗಳು ಮಳೆಯ ನಡುವೆವೂ ಉತ್ಸಾಹದಿಂದ ಈ ಸ್ವಚ್ಛತಾ ಸೇವೆ ನಡೆಸಿದ್ದಾರೆ.

ಮೈಸೂರಿಗೆ ಈಗಾಗಲೇ 2 ಸ್ವಚ್ಛ ನಗರೀ ಪಟ್ಟ ದೊರೆತಿದೆ. ಇಂದಿನ ಯುವಕ ಯುವತಿಯರು ವಿದ್ಯಾರ್ಥಿಗಳು ಸ್ವಚ್ಛತೆಯಲ್ಲಿ ತೊಡಗಿದರೇ ಮತ್ತೆ ಮೈಸೂರಿಗೆ ಮೊದಲ ಸ್ಥಾನ ಸಿಗುವುದರಲ್ಲಿ ಯಾವುದೇ ಸಂಶಯ ಇಲ್ಲ ಎಂದು ತಿಳಿಸಿದರು.

ಈ ಸಂದರ್ಭ ಆರೋಗ್ಯಾಧಿಕಾರಿ ಡಾ.ಡಿ.ಜಿ.ನಾಗರಾಜು,ಜೆಎಸ್ಎಸ್ ವಿದ್ಯಾ ಸಂಸ್ಥೆಯ ಪ್ರಾಂಶುಪಾಲರು,ಬೋಧಕರು,ಬೋಧಕೇತರ ಸಿಬ್ಬಂದಿಗಳು ಸೇರಿದಂತೆ 200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Leave a Reply

Your email address will not be published.