Breaking News

ಆಟೋ ಪಾರ್ಟ್ಸ್ ಗೋದಾಮಿನಲ್ಲಿ ರಾತ್ರಿ ಭಾರೀ ಸ್ವರೂಪದ ಬೆಂಕಿ

ಆಟೋ ಪಾರ್ಟ್ಸ್ ಗೋದಾಮಿನಲ್ಲಿ ರಾತ್ರಿ ಭಾರೀ ಸ್ವರೂಪದ ಬೆಂಕಿ

ಮೈಸೂರು:ನಗರದ ಶಾಂತಲಾ ಸಿನಿಮಾ ಮಂದಿರದ ಹಿಂಭಾಗದ ಆಯಿಲ್ ಮಿಲ್ ರಸ್ತೆಯಲ್ಲಿರುವ ಆಟೋ ಪಾರ್ಟ್ಸ್ ಗೋದಾಮಿನಲ್ಲಿ ರಾತ್ರಿ ಭಾರೀ ಸ್ವರೂಪದ ಬೆಂಕಿ ಕಾಣಿಸಿಕೊಂಡು ಅಪಾರ ಪ್ರಮಾಣದ ವಸ್ತುಗಳು ಬೆಂಕಿಗಾಹುತಿಯಾದ ಘಟನೆ ನಡೆದಿದೆ.

ಮನೋಹರಲಾಲ್ ಎಂಬವರಿಗೆ ಸೇರಿದ ಗೋದಾಮು ಇದಾಗಿದ್ದು, ರಾತ್ರಿ 11.20ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ದಟ್ಟ ಹೊಗೆ ವ್ಯಾಪಿಸಿದ್ದು ಸ್ಥಳೀಯರು ಭಯಭೀತರಾಗಿದ್ದರು. ಸರಸ್ವತಿಪುರಂ ಅಗ್ನಿಶಾಮಕ ಠಾಣೆಯಿಂದ ಮೂರು ವಾಹನಗಳು ಸ್ಥಳಕ್ಕೆ ಧಾವಿಸಿತ್ತು. ಅಗ್ನಿಶಾಮಕ ಸಿಬ್ಬಂದಿಗಳು ಹರ ಸಾಹಸಪಟ್ಟು ಬೆಂಕಿ ಆರಿಸಿದ್ದಾರೆ. ಆಕಸ್ಮಿಕವಾಗಿ ಬೆಂಕಿ ತಗುಲಿ ಈ ದುರ್ಘಟನೆ ಸಂಭವಿಸಿದೆ. ಪೊಲೀಸರು ಮತ್ತು ರಕ್ಷಣಾ ಸಿಬ್ಬಂದಿಗಳು ಸ್ಥಳದಲ್ಲೇ ಬೀಡು ಬಿಟ್ಟಿದ್ದರು. ತಡರಾತ್ರಿಯವರೆಗೂ ಬೆಂಕಿ ನಂದಿರಲಿಲ್ಲ ಎನ್ನಲಾಗಿದ್ದು, ಸತತ ನಾಲ್ಕೈದು ಗಂಟೆಗಳ ಕಾರ್ಯಾಚರಣೆಯ ಬಳಿಕ ಬೆಂಕಿ ಆರಿಸುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.

Leave a Reply

Your email address will not be published.