Breaking News

ಸೆಪ್ಟೆಂಬರ್ 30 ರಂದು ಯುವ ಸಂಭ್ರಮ

ಸೆಪ್ಟೆಂಬರ್ 30 ರಂದು ಯುವ ಸಂಭ್ರಮ

ಮೈಸೂರು:ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2018 ಸೆಪ್ಟೆಂಬರ್ 30 ರಿಂದ ಅಕ್ಟೊಬರ್ 7 ರವರೆಗೆ ಸಂಜೆ 6 ರಿಂದ 10 ಗಂಟೆಯವರೆಗೆ ಯುವ ಸಂಭ್ರಮ ಮೈಸೂರು ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ನಡೆಯಲಿದೆ.
ಸೆಪ್ಟೆಂಬರ್ 30 ರಂದು ಸಂಜೆ 6 ಗಂಟೆಗೆ ಉನ್ನತ ಶಿಕ್ಷಣ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಜಿ.ಟಿ. ದೇವೇಗೌಡ ಅವರು ಕಾರ್ಯಕ್ರಮ ಉದ್ಘಾಟಿಸುವರು.ಶಾಸಕರಾದ ಎಲ್. ನಾಗೇಂದ್ರ ಅವರು ಅಧ್ಯಕ್ಷತೆ ವಹಿಸುವರು.
ಪ್ರವಾಸೋದ್ಯಮ ಹಾಗೂ ರೇಷ್ಮೆ ಸಚಿವರಾದ ಸಾ.ರಾ. ಮಹೇಶ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ವಿಕಲಚೇತನರ ಮತ್ತು ಹಿರಿಯ ನಾಗರೀಕರು ಸಬಲೀಕರಣ ಸಚಿವೆ ಜಯಮಾಲ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ನಯಿಮಾ ಸುಲ್ತಾನ ನಜಿûೀರ್ ಅಹಮದ್, ಲೋಕಸಭಾ ಸದಸ್ಯರಾದ ಪ್ರತಾಪ್ ಸಿಂಹ, ಆರ್. ಧ್ರುವನಾರಾಯಣ್,ಶಾಸಕರಾದ ಅಡಗೂರು ಹೆಚ್.ವಿಶ್ವನಾಥ್, ಎಸ್.ಎ. ರಾಮದಾಸ್ ಮರಿತಿಬ್ಬೇಗೌಡ, ತನ್ವೀರ್ ಸೇಠ್, ಕೆ.ಟಿ. ಶ್ರೀಕಂಠೇಗೌಡ, ಎಸ್. ನಾಗರಾಜು, ಆರ್. ಧರ್ಮಸೇನ, ಕೆ.ವಿ.ನಾರಾಯಣಸ್ವಾಮಿ, ಕೆ. ಮಹದೇವ, ಎಲ್. ನಾಗೇಂದ್ರ, ಬಿ. ಹರ್ಷವರ್ಧನ್, ಡಾ|| ಯತೀಂದ್ರ ಸಿದ್ದರಾಮಯ್ಯ, ಅಶ್ವಿನ್ ಕುಮಾರ್, ಅನಿಲ್ ಚಿಕ್ಕಮಾದು, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಜಿ. ನಟರಾಜ್, ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ಕಾಳಮ್ಮ ಕೆಂಪರಾಮಯ್ಯ, ಉಪಾಧ್ಯಕ್ಷರಾದ ಎನ್.ಬಿ. ಮಂಜು ಹಾಗೂ ಇನ್ನಿತರ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

Leave a Reply

Your email address will not be published.