Breaking News

ಬಹುಪರಾಕ್ ಹೇಳೋರ ಬಗ್ಗೆ ನಿಮಗೆ ಎಷ್ಟು ಗೊತ್ತು?

ಬಹುಪರಾಕ್ ಹೇಳೋರ ಬಗ್ಗೆ ನಿಮಗೆ ಎಷ್ಟು ಗೊತ್ತು?

ಅರಮನೆಯಲ್ಲಿ ರಾಜನಷ್ಟೇ, ರಾಜಪರಿವಾರವೂ ಬಹುಮುಖ್ಯವಾದುದು. ಪೈಕಿ ಪ್ರಮುಖರಾದವರು ವಂದಿಮಾಗಧರು.

ರಾಜನೂ ಸೇರಿದಂತೆ ರಾಜ ಪರಿವಾರ ಪ್ರತಿನಿತ್ಯ ಅನುಸರಿಸಬೇಕಾದ ನೀತಿ, ನಿಯಮ, ಕೆಲಸ ಕಾರ್ಯ, ಶಿಷ್ಟಾಚಾರಗಳನ್ನು ಕೆಲವು ಚಿಹ್ನೆಗಳು, ಸಂಜ್ಞೆಗಳು, ಘೋಷಣೆಗಳು ಅಥವಾ ಲಾಂಛನಗಳ ಮೂಲಕ ಕಾಲ ಕಾಲಕ್ಕೆ ಸೂಚಿಸುತ್ತಿದ್ದವರೇ ವಂದಿಮಾಗಧರು.
ಹೊಗಳುಭಟ್ಟರು ಮತ್ತು ವಂದಿಮಾಗಧರನ್ನು ಒಂದೇ ಎಂದು ಬಿಂಬಿಸಲಾಗುತ್ತದೆ. ಆದರೆ ಇವರೀರ್ವರೂ ಬೇರೆ ಬೇರೆ. ರಾಜ ಪರಂಪರೆಯೊಂದಿಗೆ ವಂದಿಮಾಗಧರ ಪರಂಪರೆ ಬೆಳೆದು ಬಂದಿದೆ. ಅರಮನೆ ಅಷ್ಟೇ ಅಲ್ಲದೇ, ಗುರುಮನೆ, ದೇವರ ಮನೆಗಳಲ್ಲಿಯೂ ಇದ್ದ ವಂದಿಮಾಗಧರಿಗೆ ವಿಶೇಷ ಸ್ಥಾನಮಾನಗಳನ್ನು ನೀಡಿ, ಗೌರವಾದರಗಳಿಂದ ಕಾಣಲಾಗುತ್ತಿತ್ತು.

ಕ್ಷತ್ರಿಯರಲ್ಲಿ ಒಂದು ಪಂಗಡವೇ ಅಲ್ಲದೇ, ಅಂತರ್ಜಾತೀಯ ಸಂಬಂಧಗಳಿಂದ ಸೃಷ್ಟಿಯಾಗಿದ್ದ `ಸಂಕರ’ ಎಂಬ ಪಂಗಡದಲ್ಲಿ ಬಹುತೇಕರು ವಂದಿಮಾಗಧರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಮಾಗದ (ನಾಶವಾಗದ, ಉಜ್ವಲವಾದ) ಬಿರುದು ಮತ್ತು ವಂದನೆಗಳನ್ನುಹೇಳುವರೋ ಅವರೇ ವಂದಿಮಾಗಧರು. ಇನ್ನೊಂದು ಅರ್ಥದಲ್ಲಿ ವಂದಿಮ + ಆಗಧ ಎಂದರೆ ವಂದನೆ ಮಾಡುವ ಸಮೂಹವೇ ವಂದಿಮಾಗಧ ಎನ್ನಲಾಗಿದೆ.

ಅರಮನೆಯಲ್ಲಿ ರಾಜ ಉತ್ತಮೋತ್ತಮನೆಂದು ಹೇಳಲಾಗುತ್ತದೆ. ರಾಜನ ಅಕ್ಕಪಕ್ಕದಲ್ಲಿರುತ್ತಿದ್ದವರೂ ಅಷ್ಟೇ ಉತ್ತಮರಾಗಿರಬೇಕಿತ್ತು, ಅಂತಹವರೇ ಇರುತ್ತಿದ್ದರು. ಹಾಗಾಗಿ, ರಾಜನಿಗೆ ದೊರೆಯುತ್ತಿದ್ದಷ್ಟೇ ಗೌರವವನ್ನು ಆತನೊಂದಿಗೆ ಇರುತ್ತಿದ್ದ ವಂದಿಮಾಗಧರೂ ಪಡೆಯುತ್ತಿದ್ದರು ಎಂದರೆ ಇವರ ಸ್ಥಾನಮಾನ ಏನೆಂಬುದನ್ನು ಊಹಿಸಬಹುದು.
ಅರಮನೆ ಮತ್ತು ದೇವರಮನೆಗಳಲ್ಲಿ ವಂದಿಮಾಗಧರು ಗೌರವಸೂಚಿಯಾಗಿದ್ದರೆ, ಗುರುಮನೆಯಲ್ಲಿ ಕಾರ್ಯಸೂಚಿಯಾಗಿ ಇರುತ್ತಿದ್ದರು. ಅಂದರೆ ಅರಮನೆ ಮತ್ತು ದೇವರಮನೆಗಳ ಉಸ್ತುವಾರಿ ನೋಡಿಕೊಳ್ಳುವ ಮೂಲಕ ಗೌರವಸೂಚಿಯಾಗಿದ್ದರೆ, ಗುರುಮನೆಗಳ ಮೂಲಕ ಸಾರ್ವಜನಿಕ ಕ್ಷೇತ್ರ ಅಥವಾ ಕಾರ್ಯಕ್ರಮಗಳಲ್ಲಿ ಇಂತಿಂತ ಕೆಲಸಗಳು ಇಂತಿಂತ ಸಮಯದಲ್ಲಿ ಮಾಡಬೇಕೆಂದು ಸೂಚಿಸುವ ಮೂಲಕ ಕಾರ್ಯಸೂಚಿಯಾಗಿದ್ದರು. ಗುರುಮನೆ, ದೇವರಮನೆಗಳಿಗೆ ನೇಮಕವಾಗುತ್ತಿದ್ದವರನ್ನು `ಪ್ರಹರಿಗಳು’ ಅಥವಾ `ಕಾಲಸೂಚಕರು’ ಎಂದು ಕರೆಯಲಾಗುತ್ತಿತ್ತು.
ವಂದಿಮಾಗಧರು ಧರಿಸುತ್ತಿದ್ದ ವಸ್ತ್ರ, ಪದಕಗಳು ಹಿಡಿಯುತ್ತಿದ್ದ ಲಾಂಛನಗಳು ಮತ್ತು ಸೂಚಿಸುತ್ತಿದ್ದ ಸಂಜ್ಞೆಗಳನ್ನು ನೋಡಿಯೇ ಅಂದಿನ ವಿದ್ಯಮಾನ ಬಹಿರಂಗವಾಗಿ ತಿಳಿಯುತ್ತಿತ್ತು. ರಾಜನ ಮನಸ್ಥಿತಿ ಮತ್ತು ಪರಿಸ್ಥಿತಿಗಳನ್ನು ಅಥರ್ೈಸಿಕೊಂಡು, ಸರಿಯಾದ ಮೇಧಾ(ಸಮಯ) ನೋಡಿಕೊಂಡು, ಸಂದರ್ಭಗಳಿಗೆ ತಕ್ಕಂತೆ ಕರಾರುವಾಕ್ಕಾಗಿ ಸಂಜ್ಞೆಗಳನ್ನು ಮತ್ತು ಉದ್ಘೋಷಗಳನ್ನು ಎಲ್ಲರಿಗೂ ತಲುಪಿಸುವ ಬಹುದೊಡ್ಡ ಜವಾಬ್ದಾರಿ ಇವರದಾಗಿದೆ.

ಯುದ್ಧದ ಸಂದರ್ಭಗಳಲ್ಲಂತೂ ಎಲ್ಲರನ್ನೂ ಎಚ್ಚರಿಸುವ ಮತ್ತು ಸಮರ್ಥವಾಗಿರುವಂತೆ ಮಾಡುವಲ್ಲಿಯೂ ಇವರ ಹೊಣೆಗಾರಿಕೆ ಬಹುಮುಖ್ಯವಾದುದು. ಇಂತಹ ವೇಳೆಯಲ್ಲಿ 24 ಗಂಟೆಯೂ ವಂದಿಮಾಗಧರು ಪ್ರಹರ(ಪಾಳಿ)ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ವಂಶಪಾರಂಪರ್ಯವಾಗಿ ನಡೆದುಕೊಂಡು ಬರುತ್ತಿದ್ದ ವಂದಿಮಾಗಧರ ಪರಂಪರೆಯು ಜಯಚಾಮರಾಜೇಂದ್ರ ಒಡೆಯರ್ ಕಾಲಕ್ಕೆ ಕೊನೆಯಾಯಿತು. ರಾಜಾಡಳಿತಗಳು ಕೊನೆಗೊಳ್ಳುವುದರೊಂದಿಗೆ ವಂದಿಮಾಗಧರ ವಂಶಜರೂ ಮರೆಯಾದರು. ಆದರೆ, ಈಗ ಪ್ರತಿ ವರ್ಷ ದಸರಾ ಉತ್ಸವದಲ್ಲಿ ನಡೆಯುವ ರಾಜರ ಖಾಸಗಿ ದಬರ್ಾರ್ನಲ್ಲಿ ಮಾತ್ರ ಸಾಂಪ್ರದಾಯಿಕವಾಗಿ ವಂದಿಮಾಗಧರ ಉದ್ಘೋಷಗಳು ಮೊಳಗುತ್ತವೆ.

ವಿವಿಧ ಬಹುಪರಾಕು

ರಾಜ ಸಿಂಹಾಸನರೋಹಣ ಮಾಡಿದ ನಂತರ ಹೇಳುತ್ತಿದ್ದುದು.ಕೊನೆ ಸಾಲಿನಲ್ಲಿ ಕಾಲಕ್ಕೆ ತಕ್ಕಂತೆ ರಾಜರ ಹೆಸರನ್ನು ಸೇರಿಸಿಕೊಳ್ಳಲಾಗುತ್ತಿತ್ತು. ಶ್ರೀಮತ್ ಸಮಸ್ತ ಭೂಮಂಡಲ ಮಂಡನಾಯಮಾನ, ನಿಖಿಲ ವೇಷಾವತಂಸ, ಕನರ್ಾಟಕ ಜನಪದಸಂಪದಧೀಷ್ಠಾನ, ಶ್ರೀಮನ್ ಮಹೀಷೂರ ಮಹಾಸಂಸ್ಥಾನ ಮಧ್ಯೇ ದೇದೀಪ್ಯಮಾನ, ನಿಖಿಲ ಕಲಾನಿಧಿ, ಕ್ಷಿತಿಪಾಲ, ರಾಜಾಧಿರಾಜ ಮಹಾರಾಜ ಚಕ್ರವತರ್ಿ ಮಂಡಲಾನುಭೂತ, ಶ್ರೀಮದ್ರಾಜಾಧಿರಾಜ ರಾಜಪರಮೇಶ್ವರ ಇತ್ಯಾದ್ಯನೇಕ ಬಿರುದಾಂಕಿತ ಕನರ್ಾಟಕ ದಿವ್ಯಸಿಂಹಾಸನಾರೂಢ ಶ್ರೀ ಶ್ರೀ ಶ್ರೀ ಮುಮ್ಮಡಿ ಕೃಷ್ಣರಾಜೇಂದ್ರ ಭೂಮಿಪಾಲ ಪರಾಕು ಪರಾಕು ಬಹುಪರಾಕು

ವಿಜಯೀಭವ ದಿಗ್ವಿಜಯೀಭವ || ಸ್ವಸ್ತಿವಾಕ್ಯ
(ದೇವರಮನೆ, ಗುರುಮನೆಯಲ್ಲಿ, ರಾಜ ಆಸ್ಥಾನಕ್ಕೆ ಬರುವ ಮುಂಚೆ, ದೇವರ ಪೂಜೆ ಹಾಗೂ ವಿಶೇಷ ಸಂದರ್ಭಗಳಲ್ಲಿ ಮಾತ್ರ ಹೇಳುತ್ತಿದ್ದುದು)
ಸ್ವಸ್ತಿ ಪ್ರಜಾಭ್ಯಃ ಪರಿಪಾಲಯಂತಾಂ ನ್ಯಾಯ್ಯೇನ ಮಾಗರ್ೇಣ ಮಹೀಂ ಮಹೀಶಾಃ |
ಸವರ್ೇಶಾಂ ಜನಾನಾಂ ಶುಭಮಸ್ತು ನಿತ್ಯಂ | ಲೋಕಾಃ ಸಮಸ್ತಾಃ ಸುಖಿನೋ ಭವಂತು |
ಕಾಲೇ ವರ್ಷತು ಪರ್ಜನ್ಯಃ | ಪೃಥವೀ ಸಸ್ಯಶಾಲಿನೀ |
ದೇಶೋಯಂ ಕ್ಷೊಭರಹಿತೋ ಸಾಧವಃ ಸ್ಸಂತು ನಿರ್ಭಯಾಃ |
ಅಪುತ್ರಾಃ ಪುತ್ರಿಣಸ್ಸಂತು ಪುತ್ರಿಣಸ್ಸಂತು ಪೌತ್ರಿಣಃ |
ಅಧನಾಃ ಸಧನಾಸ್ಸಂತು | ಜೀವಂತು ಶರದಾಂ ಶತಂ ||
ಓಂ ಶಾಂತಿ ಶ್ಯಾಂತಿ ಶ್ಯಾಂತಿಃ

ವಾಲ್ಮೀಕಿ ವಾಕ್ಯದ ಮೂಲ
ವಂದಿಮಾಗಧರ ಉದ್ಘೋಷಗಳು `ವಾಲ್ಮೀಕಿ ರಾಮಾಯಣ’ದ ಸ್ವಸ್ತಿ ವಾಕ್ಯವೇ ಮೂಲವಾಗಿದ್ದು, ವಿಜಯನಗರ ಸಾಮ್ರಾಜ್ಯ ಕಾಲದಿಂದಲೂ ಉದ್ಘೋಷಗಳಲ್ಲಿ ಏಕರೂಪತೆ ಇದೆ.
ವಂದಿಮಾಗಧರಿಗೆ ಇರಬೇಕಾದ ಪ್ರಮುಖ ಲಕ್ಷಣಗಳೆಂದರೆ, ಸ್ಪಷ್ಟ ಉಚ್ಛಾರಣೆ, ಉಚ್ಚ ಕಂಠ, ಆರೋಗ್ಯಕರ ದೇಹ ಪ್ರಕೃತಿಯುಳ್ಳವರಾಗಿರಬೇಕು. 16 ವರ್ಷ ಮೇಲ್ಪಟ್ಟ 40 ವರ್ಷದೊಳಗಿನ ವ್ಯಕ್ತಿಗಳು ಇದಕ್ಕೆ ಅರ್ಹರಾಗಿದ್ದರು. ಅಲ್ಲದೇ, ಆಯಾ ಸಂದರ್ಭಗಳಿಗೆ ತಕ್ಕಂತೆ ಉದ್ಘೋಷಗಳನ್ನು ಹೇಳುವ ಸಾಮಥ್ರ್ಯ, ಬುದ್ಧಿವಂತಿಕೆ ಅತ್ಯಗತ್ಯವಾಗಿತ್ತು.
ಅರಮನೆಗೆ ಹೊಂದಿಕೊಂಡಂತಿದ್ದ ದೇವಾಲಯ ಅಥವಾ ಮನೆಗಳಲ್ಲಿ ಇವರನ್ನು ಸಜ್ಜುಗೊಳಿಸಲಾಗುತ್ತಿತ್ತು. ಮಕ್ಕಳಿಗೆ ಉಪನಯನ ನೀಡಿ ವಿವಿಧ ಹಂತಗಳಲ್ಲಿ ತರಬೇತಿ ನೀಡಲಾಗುತ್ತಿತ್ತು. ಗಂಡು ಮಕ್ಕಳು ರಾಜ ಆಸ್ಥಾನ ಮತ್ತಿತರೆಡೆಗಳಲ್ಲಿ ಕಾರ್ಯನಿರ್ವಹಿಸಿದರೆ, ಹೆಣ್ಣು ಮಕ್ಕಳು ರಾಣಿವಾಸದಲ್ಲಿ ದಾಸಿಯರಾಗಿ, ರಾಜಕುಮಾರಿಯರಿಗೆ ಸಖಿಯರಾಗಿರುತ್ತಿದ್ದರು ಎಂದು ಹೇಳುತ್ತಾರೆ ಸಂಗೀತ ವಿದ್ವಾನ್ ರಾ.ಸ.ನಂದಕುಮಾರ್.